ಬೆಂಗಳೂರು: ವಿವಿಧ ಇಲಾಖೆಗಳು, ನಿಗಮ ಮಂಡಳಿ, ಸಹಕಾರ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ 2,508 ಬ್ಯಾಕ್ ಲಾಗ್ ಹುದ್ದೆಗಳನ್ನು ಒಂದು ತಿಂಗಳೊಳಗೆ ನೇಮಕಾತಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಕುರಿತು ಇಂದು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ನಡೆಸಿ, ಪ್ರಗತಿ ಪರಿಶೀಲನೆ ನಡೆಸಲಾಯಿತು. ಉನ್ನತ ಶಿಕ್ಷಣ ಇಲಾಖೆಯಲ್ಲಿ 882 ಹುದ್ದೆ, ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 432, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 346, ಲೋಕೋಪಯೋಗಿ ಇಲಾಖೆಯಲ್ಲಿ 184, ಸಾರಿಗೆ ಇಲಾಖೆಯಲ್ಲಿ 178, ಸಹಕಾರ ಇಲಾಖೆಯಲ್ಲಿ 132, ರೇಷ್ಮೆ ಇಲಾಖೆಯಲ್ಲಿ 120, ನಗರಾಭಿವೃದ್ಧಿ ಇಲಾಖೆಯಲ್ಲಿ 34, ತೋಟಗಾರಿಕೆ ಇಲಾಖೆಯಲ್ಲಿ 34, ಐಟಿ ಬಿಟಿಯಲ್ಲಿ 32, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 27, ಇಂಧನ ಇಲಾಖೆಯಲ್ಲಿ 25, ಅರಣ್ಯ ಇಲಾಖೆಯಲ್ಲಿ 23, ಕೃಷಿ ಇಲಾಖೆಯಲ್ಲಿ 20, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 18, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 7, ಗೃಹ ಇಲಾಖೆಯಲ್ಲಿ 5, ಪಶುಸಂಗೋಪನೆ ಇಲಾಖೆ, ಡಿಪಿಎಆರ್, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಲಾ 2 ಹುದ್ದೆ ಹಾಗೂ ಹಣಕಾಸು ಇಲಾಖೆಯಲ್ಲಿ 1 ಬ್ಯಾಕ್ ಲಾಗ್ ಹುದ್ದೆಗಳಿವೆ.