ಬೆಂಗಳೂರು: ಕೋವಿಡ್ 19 ಪರಿಸ್ಥಿತಿ ನಿಭಾಯಿಸಲು ಆರೋಗ್ಯ ವಿಭಾಗದ ಅಗತ್ಯತೆ ಕುರಿತು ಡಿಸಿಎಂ ಅಶ್ವತ್ಥ್ ನಾರಾಯಣ್ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಆರೋಗ್ಯ ವಿಭಾಗಗಳ ಅಗತ್ಯತೆ ಕುರಿತು ಸಭೆ ನಡೆಸಿದ ಡಿಸಿಎಂ - ಮೇಯರ್ ಗೌತಮ್ ಕುಮಾರ್
ಕೊರೊನಾ ವಿರುದ್ಧ ಸಮರ ಸಾರಿರುವ ಸರ್ಕಾರ ಅಗತ್ಯ ವೈದ್ಯಕೀಯ ಪರಿಕರಗಳ ಕಡೆಗೂ ಹೆಚ್ಚಿನ ಗಮನಹರಿಸಿದೆ. ಈ ಹಿನ್ನೆಲೆ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು.
![ಆರೋಗ್ಯ ವಿಭಾಗಗಳ ಅಗತ್ಯತೆ ಕುರಿತು ಸಭೆ ನಡೆಸಿದ ಡಿಸಿಎಂ ಆರೋಗ್ಯ ವಿಭಾಗಗಳ ಅಗತ್ಯತೆ ಕುರಿತು ಸಭೆ ನಡೆಸಿದ ಡಿಸಿಎಂ](https://etvbharatimages.akamaized.net/etvbharat/prod-images/768-512-6907127-58-6907127-1587627848437.jpg)
ಪಾಲಿಕೆ ಆಸ್ಪತ್ರೆಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಾರೆ. ಸುರಕ್ಷತಾ ಕಿಟ್, ಸರ್ವೇ, ಸ್ಕ್ರೀನಿಂಗ್ಗೆ ಬೇಕಾದ ಪರಿಕರಗಳು ಇವೆ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಆಕ್ಸಿಜನ್ ಸಿಲಿಂಡರ್ನ ಸಿದ್ಧತೆ ಮಾಡಿಕೊಂಡಿರುವಂತೆ ಸೂಚನೆ ನೀಡಿದರು..
ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ವಿಶೇಷ ಆಯುಕ್ತರಾದ ರವಿಕುಮಾರ್ ಸುರಪುರ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಒಂದು ವರ್ಷದಲ್ಲಿ ಆರೋಗ್ಯ ವಿಭಾಗದಲ್ಲಿ ಏನೆಲ್ಲಾ ಆಗಬೇಕಿದೆ ಎಂಬ ಬಗ್ಗೆ ಚರ್ಚೆ ನಡೆಯಿತು. ಆಸ್ಪತ್ರೆ, ಆರೋಗ್ಯ ವಿಭಾಗಕ್ಕೆ ಬೇಕಾದ ಸಾಮಗ್ರಿಗಳ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಯಿತು. ಬೀದಿ ವ್ಯಾಪಾರಿಗಳಿಂದ ಹಿಡಿದು, ಎಲ್ಲರಲ್ಲೂ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಬೇಕಾದ ಕುರಿತು ಚರ್ಚೆ ನಡೆಯಿತು.