ಕರ್ನಾಟಕ

karnataka

ETV Bharat / city

ಸ್ವಾರ್ಥದಿಂದ ಕೆಲಸ‌ ಮಾಡಿದರೆ ಯಾವ ಉದ್ದೇಶವೂ ಈಡೇರಲ್ಲ: ಅಶ್ವತ್ಥ ನಾರಾಯಣ - ಬೆಂಗಳೂರು

ಬಿಜೆಪಿ ಪಕ್ಷದ ರಾಜರಾಜೇಶ್ವರಿನಗರ ಮಂಡಲ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಗೋ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

DCM Ashwath narayan
ಅಶ್ವತ್ಥ್ ನಾರಾಯಣ

By

Published : Dec 12, 2020, 3:28 PM IST

ಬೆಂಗಳೂರು: ರಾಜರಾಜೇಶ್ವರಿ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ರಾಜರಾಜೇಶ್ವರಿನಗರ ಮಂಡಲ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನ ಡಿಸಿಎಂ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಉದ್ಘಾಟಿಸಿದರು.

ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ

ಕಾರ್ಯಕ್ರಮಕ್ಕೂ ಮುನ್ನ ಶಾಸಕ ಮುನಿರತ್ನ, ಡಿಸಿಎಂ‌ ಆಶ್ವತ್ಥ ನಾರಾಯಣ ಸೇರಿದಂತೆ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಇನ್ನು ಈ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಎರಡು‌ ದಿನಗಳ ಕಾಲ‌ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ‌ ಮಾತನಾಡಿದ ಡಿಸಿಎಂ, ನಾವು ಯಾವಾಗಲು ನಿಸ್ವಾರ್ಥ‌ವಾಗಿ‌ ಕೆಲಸ ಮಾಡಬೇಕು. ನಾವು ಇರುವುದೇ ನಿಮಗಾಗಿ ಎಂದು ಮುನ್ನುಗ್ಗಿ ಕೆಲಸ ಮಾಡಬೇಕು. ಒಳ್ಳೆಯ ನಾಯಕತ್ವದ ಗುಣ ಇಟ್ಟುಕೊಳ್ಳಬೇಕು. ಜನರಿಗೆ ನ್ಯಾಯ ಕೊಡಿಸಲು ಕೆಲಸ ಮಾಡಬೇಕು. ಸ್ವಾರ್ಥದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡಿದರೆ ಯಾವ ಉದ್ದೇಶವೂ ಈಡೇರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಂಜೆಯೊಳಗೆ ಮುಷ್ಕರ ಹಿಂತೆಗೆದುಕೊಳ್ಳದಿದ್ದರೆ ನೌಕರರ ಮೇಲೆ ಸೂಕ್ತ ಕ್ರಮ: ಬಿಎಂಟಿಸಿ ಎಂಡಿ ಶಿಖಾ‌ ಎಚ್ಚರ

ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ABOUT THE AUTHOR

...view details