ನೆಲಮಂಗಲ: ಮಗಳು ಅಂತರ್ಜಾತಿ ವಿವಾಹವಾದ ಹಿನ್ನೆಲೆ ಮನನೊಂದ ಹೆತ್ತವರು ಮನೆ ಮುಂದಿನ ಸಂಪ್ಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹಾರೋಕೇತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂತರ್ಜಾತಿ ಮದುವೆಯಾದ ಮಗಳು: ದುಡುಕಿದ ಅಪ್ಪ-ಅಮ್ಮ ಸಾವಿಗೆ ಶರಣು! - parents committed suicide
ಮಗಳು ಓಡಿ ಹೋಗಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮನನೊಂದ ಪೋಷಕರು ಮನೆಯ ಮುಂದಿನ ಸಂಪ್ಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ. ನೆಲಮಂಗಲದಲ್ಲಿ ಈ ಪ್ರಕರಣ ನಡೆದಿದೆ.
ಆತ್ಮಹತ್ಯೆ
ಶಿವಲಿಂಗಪ್ಪ(51), ಚಂದ್ರಕಲಾ(45) ಆತ್ಮಹತ್ಯೆಗೆ ಶರಣಾದ ದಂಪತಿ. ಮಗಳು ಸೌಮ್ಯಾ ನಿನ್ನೆಯಷ್ಟೇ ಬೇರೆ ಮತ್ತೊಂದು ಸಮುದಾಯದ ಹುಡುಗನ ಜೊತೆ ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಮನನೊಂದ ದಂಪತಿ ಮನೆಯ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.