ಕರ್ನಾಟಕ

karnataka

ETV Bharat / city

ವಿಧಾನ ಪರಿಷತ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌ - ಡಿಸೆಂಬರ್‌ 10ಕ್ಕೆ ಚುನಾವಣೆ

ರಾಜ್ಯದ 20 ಜಿಲ್ಲೆಗಳಲ್ಲಿ 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಡಿಸೆಂಬರ್‌ 10 ರಂದು ಚುನಾವಣೆ ನಡೆಯಲಿದ್ದು, ಡಿ.14ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಸಂಬಂಧ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದೆ.

date announced for mlc elections in Karnataka, november 10th election, nov 14th counting
ವಿಧಾನ ಪರಿಷತ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌; ಡಿಸೆಂಬರ್‌ 10ಕ್ಕೆ ಚುನಾವಣೆ, 14ಕ್ಕೆ ಫಲಿತಾಂಶ

By

Published : Nov 9, 2021, 2:21 PM IST

Updated : Nov 9, 2021, 3:25 PM IST

ಬೆಂಗಳೂರು: ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ವೆಳಾಪಟ್ಟಿ ಪ್ರಕಟಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಮತದಾರರಾಗಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈ ಚುನಾವಣೆ ನಡೆಯಲಿದೆ.

ಪರಿಷತ್‌ ಚುನಾವಣೆ ಬಗ್ಗೆ ಚುನಾವಣಾ ಆಯೋಗದಿಂದ ಪ್ರಕಟಣೆ

ನವೆಂಬರ್ 16 ರಿಂದ ಚುನಾವಣೆಗೆ ನಾನಪತ್ರ ಸಲ್ಲಿಕೆ ಆರಂಭವಾಗಲಿದೆ. ನ.23 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ನ.26 ನಾಮಪತ್ರ ವಾಪಸಾತಿಗೆ ಅಂತಿಮ ದಿನವಾಗಿದೆ. ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಡಿ.14ಕ್ಕೆ ಮತಗಳ ಎಣಿಕೆ ನಡೆಸಿ ಚುನಾವಣೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಪರಿಷತ್‌ ಚುನಾವಣೆ ಬಗ್ಗೆ ಚುನಾವಣಾ ಆಯೋಗದಿಂದ ಪ್ರಕಟಣೆ

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್ ಆರ್ ಪಾಟೀಲ್, ಮಾಜಿ ಸಭಾಪತಿ ಪ್ರತಾಪ ಚಂದ್ ಶೆಟ್ಟಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮೇಲ್ಮನೆಯ 25 ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಚುನಾವಣೆ ನಡೆಸುತ್ತಿದೆ.

ಪರಿಷತ್‌ ಚುನಾವಣೆ ಬಗ್ಗೆ ಚುನಾವಣಾ ಆಯೋಗದಿಂದ ಪ್ರಕಟಣೆ
Last Updated : Nov 9, 2021, 3:25 PM IST

ABOUT THE AUTHOR

...view details