ಮಹದೇವಪುರ(ಬೆಂಗಳೂರು):ವಿಜಯ ದಶಮಿ ಪ್ರಯುಕ್ತ ಕಾಡುಗುಡಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಲಾಯಿತು. ಬಳಿಕ ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದ ದಸರಾ ಮೈದಾನದಲ್ಲಿ ಎಲ್ಲಾ ಗ್ರಾಮದ ಜನರು ಸೇರಿ ನಾಡಹಬ್ಬವನ್ನು ಆಚರಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ನಿಮಿತ್ತ 9 ದಿನಗಳ ವಿಶೇಷ ಪೂಜೆಯ ನಂತರ ಕಾಡುಗುಡಿ ಸುತ್ತಮುತ್ತಲಿನ ಚನ್ನಸಂದ್ರ, ಎಕೆಜಿ ಕಾಲೋನಿ, ನಾಗೋಂಡನಹಳ್ಳಿ, ಇಮ್ಮಡಿಹಳ್ಳಿ, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ಪಟ್ಟಂದೂರು ಅಗ್ರಹಾರ, ದಿನ್ನೂರು, ಬೆಳ್ಳತ್ತೂರಿನ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿ, ಶನಿ ಮಹಾತ್ಮ, ಮುನೇಶ್ವರ, ಮಾರಮ್ಮ, ಸಪಲ್ಲಮ್ಮ, ಯಲ್ಲಮ್ಮ, ಗಂಗಮ್ಮ ದೊಡ್ಡಮ್ಮ ಸೇರಿದಂತೆ ವಿವಿಧ ಗ್ರಾಮದೇವತೆಗಳನ್ನು ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿದರು.