ಬೆಂಗಳೂರು:ಮಿಂಟೋ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಾನು ಕಣ್ಣುಗಳನ್ನು ಕಳೆದುಕೊಂಡೆ. ನೀವು ಪ್ರತಿಭಟನೆ ಮಾಡುವುದಲ್ಲ, ನಾವು ಪ್ರತಿಭಟನೆ ಮಾಡಬೇಕು ಎಂದು ವೈದ್ಯರ ವಿರುದ್ಧ ಮೈಸೂರಿನ ವೆಂಕಟಾಚಲಪತಿ ಎಂಬವರು ಕೆಂಡಮಂಡಲರಾದ ಘಟನೆ ನಡೆಯಿತು.
'ಮಿಂಟೋ ಆಸ್ಪತ್ರೆ ವೈದ್ಯರಿಂದ ನಾನು ಕಣ್ಣು ಕಳ್ಕೊಂಡೆ, ಪ್ರತಿಭಟನೆ ನೀವಲ್ಲ ನಾವು ಮಾಡ್ಬೇಕು' - ವೈದ್ಯರ ವಿರುದ್ಧ ಆಕ್ರೋಶ
ಮಿಂಟೋ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಒಂದು ವರ್ಷದ ಹಿಂದೆ ಕಣ್ಣು ಕಳೆದುಕೊಂಡ ಮೈಸೂರಿನ ವೆಂಕಟಾಚಲಪತಿ ಎಂಬವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
Damage to the doctor's negligent eye
ಪ್ರತಿಭಟನೆ ಸ್ಥಳಕ್ಕೆ ಬಂದ ಅವರು, ವೈದ್ಯರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ನನ್ನ ಕಣ್ಣು ಹೋಗಿದೆ. ಈಗ ನನಗೆ ಯಾರು ಕಣ್ಣು ಕೊಡ್ತಾರೆ. ನನಗೆ ಪರಿಹಾರ ಕೊಡಿ ಇಲ್ಲವೇ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ವೈದ್ಯರು ನಯವಾದ ಮಾತುಗಳನ್ನು ಹೇಳಿ ಕಳುಹಿಸುತ್ತಾರೆ. ಎಂಬಿಬಿಎಸ್ ಎಂದು ಹೇಳಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಆಪರೇಶನ್ ಮಾಡಿಸ್ತಾರೆ. ಈಗ ನನ್ನ ಕಣ್ಣು ಹೋಗಿದೆ. ನನಗೆ ಪರಿಹಾರ ಕೊಡಲಿಲ್ಲ ಅಂದ್ರೆ ನಾನು ಬಿಡೋದಿಲ್ಲ. ಒಂದು ವರ್ಷದ ಹಿಂದೆ ಮಿಂಟೋದಲ್ಲಿ ನನ್ನ ಕಣ್ಣು ಹಾಳಾಗಿದೆ ಎಂದು ಅಳಲು ತೋಡಿಕೊಂಡರು.