ಬೆಂಗಳೂರು:ರಾಜ್ಯದಲ್ಲಿಂದು 36,326 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 106 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,432ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಇದೀಗ ಪಾಸಿಟಿವ್ ದರ 0.29% ರಷ್ಟಿದೆ.
ಇನ್ನು 24 ಗಂಟೆ ಅವಧಿಯಲ್ಲಿ 154 ಸೋಂಕಿತರು ಗುಣಮುಖರಾಗಿದ್ದು, ಈತನಕ 39,02,344 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2013 ರಷ್ಟಿವೆ. ಸೋಂಕಿಗೆ ಐವರು ಮೃತಪಡುವ ಮೂಲಕ ಸಾವಿನ ಸಂಖ್ಯೆ 40,033 ಏರಿಕೆ ಕಂಡಿದೆ. ಡೆತ್ ರೇಟ್ 4.71% ರಷ್ಟಿದೆ.
ಇನ್ನು ಬೆಂಗಳೂರಿನಲ್ಲಿ 84 ಜನರಿಗೆ ಸೋಂಕು ತಗುಲಿದ್ದು, 17,80,778ಕ್ಕೆ ಏರಿಕೆಯಾಗಿದೆ. ಇದಲ್ಲದೇ, 87 ಸೋಂಕಿತರು ಗುಣಮುಖರಾಗಿ, ಇಲ್ಲಿಯವರೆಗೆ 17,62,114 ಜನರು ಸೋಂಕಿನಿಂದ ಪಾರಾಗಿದ್ದಾರೆ. ಇಬ್ಬರು ಸೋಂಕಿತರು ಸಾವನ್ನಪ್ಪಿ, ಸಾವಿನ ಸಂಖ್ಯೆ 16,949ಕ್ಕೆ ಹೆಚ್ಚಿದೆ. ಸದ್ಯ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 1,714 ರಷ್ಟಿದೆ.
ವೈರಸ್ ಅಪ್‌ಡೇಟ್ಸ್
ಅಲ್ಪಾ- 156
ಬೇಟಾ-08