ಬೆಂಗಳೂರು:ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇತ್ತೀಚೆಗೆ ಖರೇಗಾಂವ್ ಬಳಿ ಪಿಸ್ತೂಲ್ ಪತ್ತೆ ಹಚ್ಚಿದ್ದ ಬೆನ್ನಲೇ, ರಾಜ್ಯದಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇದೇ ಪಿಸ್ತೂಲ್ ಬಳಸಿಕೊಂಡಿರಬಹುದಾ ಎಂಬ ಅನುಮಾನ ಮೂಡಿಸಿದೆ.
ಶರದ್ ಕಲಾಸ್ಕರ್ ಎಂಬಾತನೇ ಈ ಎರಡೂ ಪ್ರಕರಣಗಳ ಆರೋಪಿ. ಹೀಗಾಗಿ ಅನುಮಾನದ ಮೇರೆಗೆ ರಾಜ್ಯದ ಎಸ್ಐಟಿ ಅಧಿಕಾರಿಗಳು ದಾಬೋಲ್ಕರ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಥಾಣೆಯ ಖರೇಗಾಂವ್ ಕ್ರೀಕ್ನನಾ ಕೊಲ್ಲಿಯೊಂದರಲ್ಲಿ ಸಿಬಿಐ ಪಿಸ್ತೂಲ್ ಪತ್ತೆ ಮಾಡಿತ್ತು. ಇದೇ ಪಿಸ್ತೂಲ್ನಿಂದ ವಿಚಾರವಾದಿಗಳಾದ ದಾಬೋಲ್ಕರ್, ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.