ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಕಾನೂನು ಬಾಹಿರವಾಗಿದ್ದು, ರಾಜಕೀಯ ಪ್ರೆರಿತ, ದ್ವೇಷದಿಂದ ಕೂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೋ ಕೊಲೆ ಮಾಡಿದ್ರೆ, ದರೋಡೆ ಮಾಡಿದ್ರೆ, ಸಾಕ್ಷಿಗಳನ್ನು ನಾಶ ಮಾಡಿದ್ರೆ ಅಂಥವರನ್ನು ದಸ್ತಗಿರಿ ಮಾಡಬೇಕು. ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೇ ಹೋದರೆ ದಸ್ತಗಿರಿ ಮಾಡಲಿ. ಆದರೆ ಕರೆದಾಗೆಲ್ಲ ಹೋಗಿದ್ದಾರೆ, ಹಬ್ಬದ ದಿನವೂ ಬಿಟ್ಟಿಲ್ಲ. ಡಿಕೆಶಿ ಪಾಪ ಕಣ್ಣೀರು ಹಾಕಿಬಿಟ್ಟರು. ಎಷ್ಟು ಅಮಾನವೀಯ ಇದು. ನಾಲ್ಕು ದಿನವೂ ವಿಚಾರಣೆಗೆ ಹೋಗಿದ್ದಾರೆ. ಸಂಪೂರ್ಣ ರಾಜಕೀಯ ಸೇಡಿನ ಕ್ರಮ ಇದು. ಕಾಂಗ್ರೆಸ್ ಪಕ್ಷ ಇದನ್ನು ಸಹಿಸೋದಿಲ್ಲ. ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ. ನಾವೆಲ್ಲ ಡಿಕೆಶಿ ಜೊತೆಗಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಅವರ ಪರ ಹೋರಾಟ ಮಾಡ್ತೇವೆ ಎಂದು ಹೇಳಿದರು.