ಕರ್ನಾಟಕ

karnataka

ETV Bharat / city

ಕೊರೊನಾ ವಿಷಯದಲ್ಲಿ ಮತ್ತೆ ಸುದ್ದಿಯಾಗ್ತಿದೆ ನಗರದ ಡಿಜೆ ಹಳ್ಳಿ-ಕೆ.ಜೆ ಹಳ್ಳಿ: ಕಾರಣ? - ಬಿಬಿಎಂಪಿ ಸಿಬ್ಬಂದಿ

ಕೋವಿಡ್ ಮೊದಲನೇ ಅಲೆಯಲ್ಲಿ ಅತಿಹೆಚ್ಚು ಪ್ರಕರಣಗಳಿಂದ ನಲುಗಿದ್ದ ಶಿವಾಜಿನಗರದ ಜನತೆಯೂ ವ್ಯಾಕ್ಸಿನ್ ಬೇಡವೇ ಬೇಡ ಎನ್ನುತ್ತಿದ್ದಾರೆ. ಯಾರೊಬ್ಬರೂ ಬಂದೂ ವ್ಯಾಕ್ಸಿನ್ ಕೇಳುವವರೇ ಇಲ್ಲ, ವ್ಯಾಕ್ಸಿನ್ ಪಡೆದು ಜ್ವರ ಬಂದರೂ ಪಾಲಿಕೆ ಅಧಿಕಾರಿಗಳ ಬಳಿಯೇ ಜಗಳ ಆಡ್ತಾರೆ ಎಂದೂ ಪಾಲಿಕೆ ಸಿಬ್ಬಂದಿ ದೂರಿದ್ದಾರೆ.

 D J Halli and K J Halli people denied take vaccine
D J Halli and K J Halli people denied take vaccine

By

Published : Jul 10, 2021, 1:56 AM IST

ಬೆಂಗಳೂರು: ಬಹುದೊಡ್ಡ ಗಲಭೆಗಳಿಗೆ ಕಾರಣವಾಗಿದ್ದ ಡಿಜೆ ಹಳ್ಳಿ, ಕೆಜೆ ಹಳ್ಳಿ ಮತ್ತೆ ಸುದ್ದಿಯಲ್ಲಿದೆ. ವ್ಯಾಕ್ಸಿನ್ ಗಾಗಿ ಎಲ್ಲೆಡೆ ಕ್ಯೂ ಇದ್ದರೂ, ಈ ಏರಿಯಾಗಳಲ್ಲಿ ಮಾತ್ರ ಜನ ವ್ಯಾಕ್ಸಿನ್ ವಿತರಣೆಯಿಂದ ತಪ್ಪಿಸಿಕೊಳ್ಳೋದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಕೋವಿಡ್ ಮೊದಲನೇ ಅಲೆಯಲ್ಲಿ ಅತಿಹೆಚ್ಚು ಪ್ರಕರಣಗಳಿಂದ ನಲುಗಿದ್ದ ಶಿವಾಜಿನಗರದ ಜನತೆಯೂ ವ್ಯಾಕ್ಸಿನ್ ಬೇಡವೇ ಬೇಡ ಎನ್ನುತ್ತಿದ್ದಾರೆ. ಯಾರೊಬ್ಬರೂ ಬಂದೂ ವ್ಯಾಕ್ಸಿನ್ ಕೇಳುವವರೇ ಇಲ್ಲ, ವ್ಯಾಕ್ಸಿನ್ ಪಡೆದು ಜ್ವರ ಬಂದರೂ ಪಾಲಿಕೆ ಅಧಿಕಾರಿಗಳ ಬಳಿಯೇ ಜಗಳ ಆಡ್ತಾರೆ ಎಂದೂ ಪಾಲಿಕೆ ಸಿಬ್ಬಂದಿ ದೂರಿದ್ದಾರೆ.

ಕೊರೊನಾ ವಿಷಯದಲ್ಲಿ ಮತ್ತೆ ಸುದ್ದಿಯಾಗ್ತಿದೆ ನಗರದ ಡಿಜೆ ಹಳ್ಳಿ-ಕೆ.ಜೆ ಹಳ್ಳಿ

ಅಷ್ಟೇ ಅಲ್ಲ ಕೋವಿಡ್ ಟೆಸ್ಟ್ ಗೂ ಈ ಪ್ರದೇಶದಲ್ಲಿ ಯಾರೂ ಮುಂದಾಗೋದಿಲ್ಲವಂತೆ. ಹೀಗಾಗಿ ಮಕ್ಕಳ ಲಸಿಕೆಗಾಗಿ ಬರುವ ಪೋಷಕರಿಗೆ ಕೋವಿಡ್ ಟೆಸ್ಟ್ ಜೊತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸಹ ಜನಜಾಗೃತಿ ಮಾಡಲಾಗ್ತಿದೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ಬಿಬಿಎಂಪಿ ಸಿಬ್ಬಂದಿ ಕಡೆಯಿಂದಲೇ ಲೋಪವಿದ್ದು ಆಧಾರ್ ಸೇರಿದಂತೆ ಎಲ್ಲಾ ದಾಖಲೆ ಕೊಡಿ ಅನ್ನುತ್ತಾರೆ. ಒಂದು ಗಂಟೆ ವ್ಯಾಕ್ಸಿನ್ ಕೊಟ್ಟು ಖಾಲಿಯಾಗಿದೆ ಅಂತ ವಾಪಾಸ್​ ಕಳಿಸುತ್ತಾರೆ ಎಂದೂ ದೂರಿದ್ದಾರೆ. ಆದರೆ ವ್ಯಾಕ್ಸಿನ್ ಸರ್ವೇಯೂ ಬೆಂಗಳೂರಿನ ಪೂರ್ವ ವಿಭಾಗದ ಈ ಪ್ರದೇಶಗಳಲ್ಲಿ ಅಪೂರ್ಣವಾಗಿದೆ. ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಸರಿಯಾದ ಅಂಕಿ ಅಂಶವೂ ಸಿಗುತ್ತಿಲ್ಲ.‌ಹೀಗಾಗಿ ನಗರ ಪ್ರಾಥಮಿಕ ಆರೋಗ್ಯ ಕೆಂದ್ರಗಳಿಗೆ ಮಾತ್ರೆಗಳು, ಮಕ್ಕಳ ಲಸಿಕೆಗಾಗಿ ಬರುವ ಪೋಷಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗ್ತಿದೆ. ಜೊತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆಯೂ ಒತ್ತಾಯಿಸಲಾಗ್ತಿದೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಸಕ್ತಿ ತೋರದ ನಗರ ಪ್ರದೇಶಗಳು:

ನ್ಯೂ ಬಾಗಲೂರು ಲೇಔಟ್

ಶಿವಾಜಿನಗರ ವಾರ್ಡ್

ಪಾದರಾಯನಪುರ

ಕೆ.ಜೆ ಹಳ್ಳಿ

ಡಿ.ಜೆ ಹಳ್ಳಿ

ABOUT THE AUTHOR

...view details