ಕರ್ನಾಟಕ

karnataka

ETV Bharat / city

ಇಂಧನ ಉಳಿತಾಯ ಜಾಗೃತಿಗಾಗಿ ಸಿಲಿಕಾನ್​ ಸಿಟಿಯಲ್ಲಿ ಸೈಕ್ಲಥಾನ್​

ಇಂಧನ ಉಳಿತಾಯದೊಂದಿಗೆ ಸೈಕ್ಲಿಂಗ್ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೈಕ್ಲಥಾನ್ 2021ರಲ್ಲಿ ಭಾಗವಹಿಸಿದರು.

Cyclathon 2021
ಸೈಕ್ಲಥಾನ್ 2021

By

Published : Jan 31, 2021, 10:47 PM IST

ಬೆಂಗಳೂರು:ಇಂಧನ ಉಳಿತಾಯದೊಂದಿಗೆ ಸೈಕ್ಲಿಂಗ್ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೈಕ್ಲಥಾನ್ 2021ರಲ್ಲಿ ಭಾಗವಹಿಸಿದರು.

ಕಂಠೀರವ ಕ್ರೀಡಾಂಗಣದಿಂದ ಪ್ರಾರಂಭವಾದ ಸೈಕ್ಲಥಾನ್​ನಲ್ಲಿ ಸುಮಾರು 500 ಸೈಕ್ಲಿಸ್ಟ್​ಗಳು ಪಾಲ್ಗೊಂಡಿದ್ದರು. ಕಬ್ಬನ್ ಪಾರ್ಕ್ ಸುತ್ತಮುತ್ತ ಪ್ರದೇಶದಲ್ಲಿ ಸುಮಾರು 5 ಕಿ.ಮೀ. ಸೈಕ್ಲಿಂಗ್ ನಡೆಸಿ ಸೈಕಲ್ ಬಳಕೆ ಮತ್ತು ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಮುಖ್ಯ ಕಾರ್ಯದರ್ಶಿ, ಇಂಧನ ಹಾಗೂ ಅನಿಲ‌ ಉಳಿತಾಯ ಮಾಡುವ ನಿಟ್ಟಿನಲ್ಲಿ ಸೈಕ್ಲಿಂಗ್, ವಾಕಿಂಗ್, ಸಾರ್ವಜನಿಕ ಸಾರಿಗೆ, ಕಾರ್ ಪೂಲಿಂಗ್ ಹೆಚ್ಚೆಚ್ಚು ಬಳಸಬೇಕು. ಆ ಮೂಲಕ ನಗರದ ವಾಹನ ದಟ್ಟಣೆಯನ್ನೂ ನಿವಾರಿಸಬಹುದಾಗಿದೆ. ಅದರ ಜೊತೆಗೆ ಪರೋಕ್ಷವಾಗಿ ಜನರು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಗಲಿದೆ ಎಂದರು.

ಜಿಎಐಎಲ್ ಆಯೋಜಿಸಿರುವ ಸೈಕ್ಲಥಾನ್ ಸಾಕ್ಷಮ್ 2021ರಲ್ಲಿ ಆಂತರಿಕ ಭದ್ರತೆಯ ಎಡಿಜಿಪಿ ಭಾಸ್ಕರ್ ರಾವ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಮತ್ತು ಜಿಎಐಎಲ್​ನ ಕಾರ್ಯಕಾರಿ ನಿರ್ದೇಶಕ ಮುರುಗೇಶನ್ ಪಾಲ್ಗೊಂಡಿದ್ದರು.

ABOUT THE AUTHOR

...view details