ಬೆಂಗಳೂರು:ಕೊರೊನಾ ಲಾಕ್ಡೌನ್ ಆಗಿದ್ದೇ ತಡ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಲಾಕ್ಡೌನ್ ವೇಳೆ ಜನರು ಹೆಚ್ಚು ಮೊಬೈಲ್ ಬಳಕೆ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ವಿವಿಧ ಮಾರ್ಗಗಳಲ್ಲಿ ಕೋಟ್ಯಂತರ ಜನರನ್ನು ವಂಚಿಸಿದ್ದಾರೆ.
ದೇಶದ ಕ್ರೈಂ ರೇಟ್ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್ಸಿಆರ್ಬಿ) 2020ರಲ್ಲಿ ನಡೆದ ಅಪರಾಧ ಪ್ರಕರಣಗಳ ವರದಿ ಪ್ರಕಟಿಸಿದೆ. ಈ ಸೈಬರ್ ವಂಚನೆ ಪ್ರಕರಣಗಳು ಅತಿ ಹೆಚ್ಚು ನಡೆದಿರುವುದು ಕರ್ನಾಟಕ ರಾಜ್ಯದಲ್ಲಿ.