ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ಹಣವನ್ನ ಕಸ್ಟೋಡಿಯನ್ ವಾಹನ ಚಾಲಕ ಕದ್ದಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪವನ್ ಬಂಧಿತ ಆರೋಪಿ.
ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ಹಣವನ್ನ ಕಸ್ಟೋಡಿಯನ್ ವಾಹನ ಚಾಲಕ ಕದ್ದಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪವನ್ ಬಂಧಿತ ಆರೋಪಿ.
ಕಮ್ಮನಹಳ್ಳಿ ಮುಖ್ಯರಸ್ಥೆಯ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಬೇಕಿತ್ತು. ಹೀಗಾಗಿ ಗನ್ಮ್ಯಾನ್ ಹಾಗೂ ಮತ್ತೊಬ್ಬ ಹಣ ತುಂಬಿಸಲು ಹೋದಾಗ ಚಾಲಕ ಪವನ್ 99 ಲಕ್ಷ ರೂ ಹಣದ ಸಮೇತ ಪರಾರಿಯಾಗಿದ್ದಾನೆ.
ರೈಟರ್ಸ್ ಏಜೆನ್ಸಿಯ ಕಸ್ಟೋಡಿಯನ್ ವಾಹನ ಚಾಲಕನಾಗಿದ್ದ ಪವನ್, ಮಂಡ್ಯ ಮೂಲದವನಾಗಿದ್ದು ಕೆಲಸಕ್ಕೆ ಸೇರಿ ಕೇವಲ ಒಂದು ವಾರವಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದದಂತೆ ಬಾಣಸವಾಡಿ ಠಾಣೆಯಲ್ಲಿ ಕಸ್ಟೋಡಿಯನ್ ಏಜೆನ್ಸಿ ಪ್ರತಿನಿಧಿಯಿಂದ ದೂರು ದಾಖಲಾಗಿತ್ತು. ಹೀಗಾಗಿ ಸಿಸಿಟಿವಿ ದೃಶ್ಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಇನ್ನು ತನಿಖೆ ವೇಳೆ ಆರೋಪಿ ಕಮ್ಮನಹಳ್ಳಿ ಮುಖ್ಯರಸ್ಥೆಯ ಬಳಿ ವಾಹನ ಸಮೇತ ಪರಾರಿ ಆಗಿ ಲಿಂಗರಾಜಪುರ ಬಳಿ ವಾಹನ ಬಿಟ್ಟು ಹಣ ದೋಚಿರುವ ಮಾಹಿತಿ ಬಿಚ್ಚಿಟ್ಟಿದ್ದಾನೆ.