ಬೆಂಗಳೂರು :ಕುಟುಂಬಸ್ಥರು ಜಾಮೀನಿಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮನೋಜ್ ಅಲಿಯಾಸ್ ಹೂವು ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ಕೈದಿ.
ಡಕಾಯಿತಿ ಪ್ರಕರಣವೊಂದರಲ್ಲಿ ಚಾಮರಾಜಪೇಟೆ ಪೊಲೀಸರು 15 ದಿನಗಳ ಹಿಂದೆ ಮನೋಜ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈತ ಈ ಹಿಂದೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಮೂರು-ನಾಲ್ಕು ಬಾರಿ ಜೈಲು ಸೇರಿದ್ದ. ಸಕ್ರಿಯ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮನೋಜ್ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನ ಟಾಯ್ಲೆಟ್ವೊಂದರ ಬಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.