ಬೆಂಗಳೂರು :ನಗರದಲ್ಲಿ ಕೊರೊನಾ ಸೋಂಕಿನ ಸರಪಳಿ ಮುರಿಯಲು ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಆದೇಶ ಬೆನ್ನಲೇ ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯರು ಕ್ಯೂ ನಿಂತಿದ್ದಾರೆ.
ಎರಡು ವಾರಗಳ ಕಾಲ ಬಿಗಿ ಕರ್ಫ್ಯೂ ಜಾರಿ ಆದೇಶಕ್ಕೂ ಮುನ್ನ ಲಾಕ್‌ಡೌನ್ ವದಂತಿಯಿಂದ ನಗರದ ಕೆಲ ಬಾರ್‌ಗಳ ಮುಂದೆ ಜನ ಜಮಾಯಿಸಿದ್ದರು.
ಮದ್ಯ ಸಿಗುವುದಿಲ್ಲ ಎಂಬ ಆತಂಕದಿಂದಲೇ ಬಾರ್‌ಗಳ ಮುಂದೆ ಜನರು ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಪತ್ರಿಕಾಗೋಷ್ಠಿ ನಡೆಸಿ ಮದ್ಯ ಪಾರ್ಸೆಲ್ ಖರೀದಿಸಲು ಅವಕಾಶ ಕಲ್ಪಿಸಿದ್ದರಿಂದ ಮದ್ಯಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕರ್ಫ್ಯೂ ಆದೇಶ ಬೆನ್ನಲೇ ಬಾರ್‌ಗಳ ಮುಂದೆ 'ಗುಂಡ್'ಹೈಕ್ಳು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ವಿಕ್ಟೋರಿಯಸ್ ವೈನ್ ಶಾಪ್ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಪಾರ್ಸೆಲ್ ಅನುಮತಿ ನೀಡಿರುವುದರಿಂದ ಬೆಳ್ಳಂ ಬೆಳಗ್ಗೆ ಬಾರ್ಗಳ ಮುಂದೆ ಮದ್ಯಪಾನಿಗಳು ಸೇರಲಿದ್ದಾರೆ.
ಈ ನಿಟ್ಟಿನಲ್ಲಿ ನಗರದ ಬಹುತೇಕ ಬಾರ್‌ಗಳ ಮುಂದೆ ದೈಹಿಕ ಅಂತರ ಕಾಯ್ದುಕೊಳ್ಳಲು ಬೇಕಾದ ಸಿದ್ಧತೆಗಳನ್ನು ಆಯಾಯ ಬಾರ್‌ಗಳ ಮಾಲೀಕರು ನಡೆಸುತ್ತಿದ್ದಾರೆ.