ಯಲಹಂಕ : ಜಿಕೆವಿಕೆ ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕಲ್ಟಿವೇಟ್ ಕಂಪನಿ ಪ್ರಮುಖ ಕೃಷಿ ಬೆಳೆಗಳಿಗೆ ಸಂವೇದಕ ಆಧಾರಿತ ಸ್ವಯಂಚಾಲಿತ ನೀರಾವರಿ ತಂತ್ರಜ್ಞಾನದ ಸಂಶೋಧನೆ ಮಾಡಿದ್ದು, ಈ ಮೂಲಕ ಸ್ಮಾರ್ಟ್ ಇರಿಗೇಷನ್ನಲ್ಲಿ ಸ್ಮಾರ್ಟ್ ಕೃಷಿ ಮಾಡಲು ನೆರವಾಗಿದೆ.
ನೀರಿನ ಪ್ರಮಾಣ ಮತ್ತು ಕಾಲಾವಧಿ ಆಧಾರದ ಮೇಲೆ ರೈತರು ಬೆಳೆಗಳಿಗೆ ನೀರು ಹಾಯಿಸುತ್ತಾರೆ. ಆದರೆ ಇದರಿಂದ ಬೆಳೆಗಳಿಗೆ ಬೇಕಾದ ಪ್ರಮಾಣದಷ್ಟು ನೀರು ಒದಗಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಬೆಳೆಗಳಿಗೆ ನೀರು ಹೆಚ್ಚಾದರೆ, ಇಲ್ಲವೆ ಕಡಿಮೆಯಾದರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಇಂತಹ ಸಮಸ್ಯೆಯನ್ನು ಅರಿತ ಕಲ್ಟಿವೇಟ್ ಕಂಪನಿ ಬೆಳೆಗೆ ಬೇಕಾದಷ್ಟು ನೀರನ್ನು ಅವಶ್ಯಕ ಸಮಯದಲ್ಲಿ ಹರಿಸುವಂಥ ಸ್ವಯಂ ಚಾಲಿತ ತಂತ್ರಜ್ಞಾನವನ್ನು ಸಂಶೋಧನೆ ಮಾಡಿದೆ.