ಬೆಂಗಳೂರು :ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯ ಮತ್ತೊಂದು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ತಾತ್ಕಾಲಿಕವಾಗಿ ಏಳು ದಿನಗಳ ಕಾಲ ಕಬ್ಬನ್‌ಪಾರ್ಕ್ ಪೊಲೀಸ್ ಠಾಣಾ ಕಾರ್ಯವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಖಾಕಿ ಕೈಗೂ ಕ್ವಾರಂಟೈನ್ ಸೀಲ್.. ಕಬ್ಬನ್ ಪಾರ್ಕ್ ಠಾಣೆ 7 ದಿನ ಸೀಲ್ಡೌನ್ - Cops in Home Quarantine
ಎರಡು ದಿನಗಳ ಹಿಂದೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ..
![ಖಾಕಿ ಕೈಗೂ ಕ್ವಾರಂಟೈನ್ ಸೀಲ್.. ಕಬ್ಬನ್ ಪಾರ್ಕ್ ಠಾಣೆ 7 ದಿನ ಸೀಲ್ಡೌನ್ Cubban park police station seal down](https://etvbharatimages.akamaized.net/etvbharat/prod-images/768-512-7700018-181-7700018-1592658574737.jpg)
ಕಬ್ಬನ್ ಪಾರ್ಕ್ ಠಾಣೆ ಸೀಲ್ಡೌನ್
ಎರಡು ದಿನಗಳ ಹಿಂದೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ಠಾಣೆಗೆ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸೀಲ್ಡೌನ್
ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿ ಕೈಗಳಿಗೂ ಕ್ವಾರಂಟೈನ್ ಸೀಲ್ ಹಾಕಿ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
Last Updated : Jun 20, 2020, 7:38 PM IST