ಕರ್ನಾಟಕ

karnataka

ETV Bharat / city

ಸೀಳುನಾಯಿ ಪದ ಬಳಕೆ: ಸಿದ್ದರಾಮಯ್ಯ ಮನಸ್ಥಿತಿಗೆ ಧಿಕ್ಕಾರ ಎಂದ ಸಿಟಿ ರವಿ

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಸಿಟಿ ರವಿ
ಸಿಟಿ ರವಿ

By

Published : Jun 10, 2022, 10:04 AM IST

ಬೆಂಗಳೂರು: ನಾನು ಒಬ್ಬ ಮಾತನಾಡಿದರೆ ಇದಕ್ಕೆ ಪ್ರತಿಯಾಗಿ 25 ಸೀಳುನಾಯಿಗಳು ಬೊಗಳುತ್ತವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಆಡಳಿತ ಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದು ಮನಸ್ಥಿತಿಗೆ ಧಿಕ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಒಳಗಡೆ ಉಳಿದ ಪಕ್ಷಗಳ ಬಗ್ಗೆ ಇರುವ ಭಾವನೆಯನ್ನ ಶಬ್ದಗಳ ಮೂಲಕ ಅವರು ವ್ಯಕ್ತಪಡಿಸಿದ್ದಾರೆ. ಯಾರಾದರೂ ಪ್ರಶ್ನೆನೇ ಮಾಡಬಾರದು ಎಂದಾದರೆ ಅದು ಸರ್ವಾಧಿಕಾರಿ ಧೋರಣೆ. ಅವರಿಗೆ ಕೌಂಟರೇ ಕೊಡಬಾರದು ಎಂದರೆ ಅವರು ಹೇಳಿದ್ದು, ವೇದ ವ್ಯಾಕ್ಯ ಎಂದು ಭಾವಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಚರ್ಚೆಯೇ ತಾಕತ್ತು, ಆದರೆ ಇದಕ್ಕೆ ಅಪಮಾನಕರವಾಗುವಂತೆ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಇದು ಅವರ ಕೆಟ್ಟ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ‌. ಇಂತಹವರು ರಾಜ್ಯದ ನಾಯಕರಾಗಿದ್ದು, ನಮ್ಮ ದುರಾದೃಷ್ಟ. ಅವರ ಮನಸ್ಥಿತಿಗೆ ಧಿಕ್ಕಾರ ಎಂದು ವಾಗ್ದಾಳಿ ನಡೆಸಿದರು.

(ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಇಂದೇ ಮತದಾನ, ಇಂದೇ ಫಲಿತಾಂಶ.. 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ)

ABOUT THE AUTHOR

...view details