ಬೆಂಗಳೂರು: ರಾಜ್ಯಪಾಲರು ಎಲ್ಲ ವಾಸ್ತವಾಂಶವನ್ನು ಭಾಷಣದಲ್ಲಿ ಹೇಳಬೇಕು. ಇಲ್ಲವಾದರೆ ಅದು ಕಟ್ಟು ಕಥೆಯಾಗುತ್ತದೆ ಎಂದು ಸಿ.ಟಿ.ರವಿ ಹೇಳಿದರು.
ರಾಜ್ಯಪಾಲರ ಭಾಷಣ ಕಟ್ಟು ಕಥೆಯಾಗಬಾರದು: ಸಿ.ಟಿ.ರವಿ - news kannada
ರಾಜ್ಯಪಾಲರು ಸರ್ಕಾರದ ಪರವಾಗಿ ಮಾತನಾಡುತ್ತಾರೆ. ಆದರೆ ಸರ್ಕಾರಕ್ಕೆ ಬೆಂಬಲ ಕೊಟ್ಟ ಪಕ್ಷವೇ ಸರ್ಕಾರದ ಪರವಿಲ್ಲ. ಹೀಗಿರುವಾಗ ರಾಜ್ಯಪಾಲರು ಈ ಸಂಗತಿಗಳನ್ನು ಹೇಳಬೇಕು ಎಂದು ಸಿ ಟಿ ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿ ಟಿ ರವಿ
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರದ ಪರವಾಗಿ ಮಾತನಾಡುತ್ತಾರೆ. ಆದರೆ ಸರ್ಕಾರಕ್ಕೆ ಬೆಂಬಲ ಕೊಟ್ಟ ಪಕ್ಷವೇ ಸರ್ಕಾರದ ಪರವಿಲ್ಲ. ಹೀಗಿರುವಾಗ ರಾಜ್ಯಪಾಲರು ಈ ಸಂಗತಿಗಳನ್ನು ಹೇಳಬೇಕು ಎಂದರು.
ಪುಟ್ಟರಂಗಶೆಟ್ಟರ ಲಂಚದ ಕತೆಯನ್ನೂ ಅವರು ಹೇಳಬೇಕು. ರಾಜ್ಯಪಾಲರ ಭಾಷಣ ಹೇಗಿರುತ್ತದೆ ಎಂಬುದರ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರ ಯಾರ ವಿಶ್ವಾಸದಲ್ಲಿ ನಡೆಯುತ್ತಿದೆ ಎಂದು ಮೊದಲು ಸಾಬೀತಾಗಬೇಕು. ನಾನು ಅಸಹಾಯಕ, ನಾನು ಮುಲಾಜಿನಲ್ಲಿದ್ದೇನೆ ಎನ್ನುವವರು ಯಾರ ವಿಶ್ವಾಸದಲ್ಲಿದ್ದಾರೆ ತಿಳಿಸಬೇಕು ಎಂದು ಟಾಂಗ್ ನೀಡಿದರು.