ಕರ್ನಾಟಕ

karnataka

ETV Bharat / city

ಕ್ರಷರ್​ನಲ್ಲಿ ಆಯತಪ್ಪಿ ಬಿದ್ದು ಒಬ್ಬನ ಸಾವು, ಮತ್ತೋರ್ವನ ಕೈ ಮುರಿತ: ಮಾಲೀಕನ ವಿರುದ್ಧ ಎಫ್ಐಆರ್ - ಚಾಮರಾಜನಗರ ಕ್ರಿಸ್ಟಲ್ ಕ್ರಷರ್ ಕಾರ್ಮಿಕ ಸಾವು

ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಬಳಿಯ ಕ್ರಿಸ್ಟಲ್ ಕ್ರಷರ್​ನಲ್ಲಿ ಜಾಕ್‍ಪ್ಲೇಟ್ ದುರಸ್ತಿ ವೇಳೆ ಆಯತಪ್ಪಿ ಕೆಳಗೆ ಬಿದ್ದು ಒರ್ವ ಮೃತಪಟ್ಟು, ಮತ್ತೋರ್ವ ಕಾರ್ಮಿಕರನ ಕೈ ಮುರಿದ ಘಟನೆ ಜರುಗಿದೆ. ಕ್ರಷರ್ ಮಾಲೀಕನ ಮೇಲೆ ದೂರು ದಾಖಲಾಗಿದೆ.

Crystal Crusher man death incident
ಕ್ರಿಸ್ಟಲ್ ಕ್ರಷರ್

By

Published : Aug 31, 2021, 9:30 PM IST

ಚಾಮರಾಜನಗರ: ಬಿಳಿಕಲ್ಲು ಕ್ರಷರ್​ನ ಜಾಕ್‍ಪ್ಲೇಟ್ ದುರಸ್ತಿ ವೇಳೆ ಆಯತಪ್ಪಿ ಕೆಳಗೆ ಬಿದ್ದು ಒರ್ವ ಮೃತಪಟ್ಟು, ಮತ್ತೋರ್ವ ಕಾರ್ಮಿಕರನ ಕೈ ಮುರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ ಬಳಿಯ ಕ್ರಿಸ್ಟಲ್ ಕ್ರಷರ್​ನಲ್ಲಿ ನಡೆದಿದೆ.

ಕೇರಳ ರಾಜ್ಯದ ಪೆರಂಬೂರು ಮೂಲದ ವಿಪಿನ್ ರಾಜ್(36) ಮೃತ ಆಪರೇಟರ್. ಚಾಲಿ ಬಾಬು ಎಂಬಾತ ಕೈ ಮುರಿತಕ್ಕೊಳಗಾಗಿ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕ್ರಿಸ್ಟಲ್ ಕ್ರಷರ್​ನ ಚಾಕ್‍ಫ್ಲೆಟ್ ಕೆಟ್ಟಿತ್ತು. ಆಗ ಆಪರೇಟರ್ ವಿಪಿನ್ ರಾಜ್ ದುರಸ್ತಿಗೆ ಪ್ರಯತ್ನ ನಡೆಸುವ ವೇಳೆ ಆಯತಪ್ಪಿ ಬಿದ್ದ ಕಾರಣ ವಿಪಿನ್ ರಾಜ್ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.

ದೂರಿನ ಆಧಾರದ ಮೇಲೆ ಕ್ರಷರ್ ಮಾಲೀಕ ಪಿ.ಕೆ.ಅನ್ಸರ್, ಕ್ರಷರ್ ವ್ಯವಸ್ಥಾಪಕ ಗಫೂರ್ ಎಂಬವರ ಮೇಲೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details