ಬೆಂಗಳೂರು:ಇಂದು ಅಂತಾರಾಷ್ಟ್ರೀಯ ಡ್ರಗ್ ದಿನಾಚರಣೆ. ಈ ದಿನದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಈಟಿವಿ ಭಾರತದ ಜೊತೆ ಮಾತನಾಡಿದ್ದು, ಡ್ರಗ್ಸ್ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಡ್ರಗ್ಸ್ ಪೊಲೀಸ್ ಇಲಾಖೆಗೆ ಸೇರಿದ್ದು ಮಾತ್ರವಲ್ಲ, ಪೊಲೀಸರು ಕೇಸ್ ಪತ್ತೆ ಮಾಡುತ್ತಾರೆ. ನಮ್ಮ ಜೊತೆ ವಿದ್ಯಾರ್ಥಿಗಳು, ಯುವಕರು, ಹೋಟೆಲ್, ಉದ್ಯಮಿಗಳು, ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ಬೆಂಗಳೂರು ನಗರದಲ್ಲಿ ಯುವಕ - ಯುವತಿಯರು ಹೆಚ್ಚಾಗಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಜನ ಬರುತ್ತಿದ್ದಾರೆ. ಹೀಗಾಗಿ ಪೊಲೀಸರು ಮಾತ್ರ ಕೆಲಸ ಮಾಡಿದರೆ ಸಾಲದು. ನಗರದ ಜನತೆ ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಭಾಸ್ಕರ್ ರಾವ್ ತಿಳಿಸಿದರು.