ಕರ್ನಾಟಕ

karnataka

ETV Bharat / city

ವಿದ್ಯುತ್ ಚಿತಾಗಾರ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಬಿಬಿಎಂಪಿ - ಬೆಂಗಳೂರು

ಕೊರೊನಾ ಮತ್ತು ಕೊರೊನೇತರ ಸಮಸ್ಯೆಯಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ ಚಿತಾಗಾರದ ಸಿಬ್ಬಂದಿಗೆ ತಲಾ‌ 500 ರೂ.ಪ್ರೋತ್ಸಾಹ ಧನ ನೀಡಲು ಪಾಲಿಕೆ ನಿರ್ಧರಿಸಿದೆ.

Crematorium Staff will get 500 Rs incentive: BBMP special commissioner
ವಿದ್ಯುತ್ ಚಿತಾಗಾರ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಬಿಬಿಎಂಪಿ

By

Published : Apr 23, 2021, 1:19 AM IST

ಬೆಂಗಳೂರು: ನಗರದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೋವಿಡ್‌ ಸಂಖ್ಯೆ ಜೊತೆಗೆ ಸೋಂಕಿನಿಂದ ಮರಣ ಹೊಂದುತ್ತಿರುವವರ ಪ್ರಮಾಣ ಕೂಡ ಜಾಸ್ತಿಯಾಗಿದೆ. ಕೊರೊನಾದಿಂದ ಮರಣ ಹೊಂದುತ್ತಿರುವ ಹಿನ್ನಲೆಯಲ್ಲಿ ನಗರದ ಶವಗಾರಗಳಲ್ಲಿ ಶವಗಳ ದಹನ ಮಾಡೋದಕ್ಕೆ ಸರತಿ ಸಾಲು ಇರುತ್ತದೆ. ಇದ್ರಿಂದಾಗಿ ವಿದ್ಯುತ್ ಚಿತಾಗಾರದ ಸಿಬ್ಬಂದಿಗೆ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಚಿತಾಗಾರದ ಸಿಬ್ಬಂದಿಗೆ ಕೊರೊನಾ ಮತ್ತು ಕೊರೊನೇತರ ಸಮಸ್ಯೆಯಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ತಲಾ‌ 500 ರೂ.ಪ್ರೋತ್ಸಾಹ ಧನ ನೀಡಲು ಪಾಲಿಕೆ ನಿರ್ಧರಿಸಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಕೊರೊನಾ ರಣಕೇಕೆ : ಒಂದೇ ದಿನದಲ್ಲಿ 25 ಸಾವಿರ ಗಡಿ ದಾಟಿದ ಕೋವಿಡ್​ ಕೇಸ್​!

ಏ.1ರಿಂದ ಅನ್ವಯವಾಗುವಂತೆ ಈ ಆದೇಶ ಜಾರಿ ಆಗಲಿದ್ದು, ಮುಂದಿನ 2 ತಿಂಗಳ ವರೆಗೆ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ಆದೇಶ ಹೊರಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವ ವ್ಯಕ್ತಿ ಶವ ಸಂಸ್ಕಾರಕ್ಕೆ ಬಳಸುವ ಚಟ್ಟದ ಹಣ 900 ರೂ. ಬೂದಿ ಸಂಗ್ರಹ ಮಾಡುವ ಮಡಿಕೆಗೆ 100 ರೂ. ಸೇರಿ ಒಟ್ಟು ಒಂದು ಸಾವಿರ ರೂಪಾಯಿ ಹಾಗೂ ಚಿತಾಗಾರದಲ್ಲಿ ನಡೆಯುವ ಎಲ್ಲಾ ಶವ ಸಂಸ್ಕಾರಕ್ಕೂ ಸಿಬ್ಬಂದಿಗೆ ತಲಾ 500 ರೂ. ಪ್ರೋತ್ಸಾಹ ಧನ ನಿಗದಿ ಮಾಡಲಾಗಿದೆ. ಎಲ್ಲ ಪ್ರೋತ್ಸಾಹ ಧನವನ್ನೂ ಕೋವಿಡ್ -19 ನಿಧಿಯಿಂದ ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದ್ದು, ಉಚಿತ ಕೊರೊನಾ ಶವ ಸಂಸ್ಕಾರ ಮುಂದುವರಿಸಲಾಗಿದೆ.

ಟಿಆರ್ ಮಿಲ್‌ನಲ್ಲಿ ಸೋಂಕಿತರ ಶವ ಸಂಸ್ಕಾರ

ಚಾಮರಾಜಪೇಟೆಯ ಟಿಆರ್ ಮಿಲ್ ರುಧ್ರಭೂಮಿಯಲ್ಲೂ ಕೊರೊನಾ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅವಶ್ಯವಿರುವ ಸೌದೆ ಮತ್ತು ಚಟ್ಟಕ್ಕೆ ಸೇರಿ 5500 ರೂ. ಗರಿಷ್ಠ ವೆಚ್ಚದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಮತ್ತು ಚಟ್ಟದ ವೆಚ್ಚವನ್ನು ಕೋವಿಡ್ -19 ನಿಧಿಯಿಂದ ಭರಿಸುವಂತೆ ವಿಶೇಷ ಆಯುಕ್ತರು ಆದೇಶಿಸಿದ್ದಾರೆ.

ABOUT THE AUTHOR

...view details