ಕರ್ನಾಟಕ

karnataka

ETV Bharat / city

ಕೋವಿಡ್‌ ರೂಪಾಂತರ ಸ್ವಾಭಾವಿಕ, ಡೆಲ್ಟಾ ಪ್ಲಸ್ ಅಧ್ಯಯನ ನಡೆಯಬೇಕು - ಡಾ.ಮಂಜುನಾಥ್ - ಕೋವಿಡ್‌ ರೂಪಾಂತರ ಸ್ವಾಭಾವಿಕ

ಕೊರೊನಾ ತಳಿ ಬದಲಾವಣೆ ಇದರ ಸ್ವಾಭಾವಿಕ ಸ್ವಭಾವ. ಹೀಗಾಗಿ ಡೆಲ್ಟಾ ಪ್ಲಸ್‌ನ ಗುಣಲಕ್ಷಣಗಳೇನು, ಮೊದಲಿಗಿಂತ ತೀವ್ರವಾಗಿದೆಯಾ ಎಂಬ ಬಗ್ಗೆ ಪ್ರಸ್ತುತ ನಿರ್ಧರಿಸಲು ಸಾಧ್ಯವಿಲ್ಲ. ಈ ಬಗ್ಗೆ ಅಧ್ಯನ ನಡೆಯಬೇಕಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಡಾ.ಮಂಜುನಾಥ್ ಹೇಳಿದ್ದಾರೆ.

covid variant is natural, delta plus study needed - Dr.Manjunath
ಕೋವಿಡ್‌ ರೂಪಾಂತರ ಸ್ವಾಭಾವಿಕ, ಡೆಲ್ಟಾ ಪ್ಲಸ್ ಅಧ್ಯಯನ ನಡೆಯಬೇಕು - ಡಾ.ಮಂಜುನಾಥ್

By

Published : Jun 25, 2021, 3:21 AM IST

ಬೆಂಗಳೂರು: ಕೋವಿಡ್-19 ರೂಪಾಂತರಿಯಾದ ಡೆಲ್ಟಾ ಪ್ಲಸ್ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ. ಕೊರೊನಾ ರೂಪಾಂತರಗೊಳ್ಳುವುದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಡಾ.ಮಂಜುನಾಥ್ ತಿಳಿಸಿದ್ದಾರೆ. ತಳಿ ಬದಲಾವಣೆ ಇದರ ಸ್ವಾಭಾವಿಕ ಸ್ವಭಾವ. ಹೀಗಾಗಿ ಡೆಲ್ಟಾ ಪ್ಲಸ್‌ನ ಗುಣಲಕ್ಷಣಗಳೇನು, ಮೊದಲಿಗಿಂತ ತೀವ್ರವಾಗಿದೆಯಾ ಎಂಬ ಬಗ್ಗೆ ಪ್ರಸ್ತುತ ನಿರ್ಧರಿಸಲು ಸಾಧ್ಯವಿಲ್ಲ. ನೂರು ಜನರಲ್ಲಿ ಈ ವೈರಸ್ ಕಂಡುಬಂದರೆ ಇದರ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡಬಹುದು ಎಂದು ಹೇಳಿದ್ದಾರೆ.

ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ತೀವ್ರವಾಗಿ ಹರಡಿತ್ತು. ಹೀಗಾಗಿ ಡೆಲ್ಟಾ ಪ್ಲಸ್ ಕೂಡಾ ತೀವ್ರವಾಗಿ ಹರಡಬಹುದು ಎಂಬ ಸಾಧ್ಯತೆ ಇದೆ. ಆದರೆ ಕೋವಿಡ್ ಹೊಸ ತಳಿ, ರೂಪಾಂತರ ಬರುವುದರಲ್ಲಿ ವಿಶೇಷವೇನಿಲ್ಲ. ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಡಿಸೆಂಬರ್ ವರೆಗೂ ಯಾವುದೇ ಸಭೆ, ಸಮಾರಂಭದಲ್ಲಿ ಭಾಗವಹಿಸುವುದನ್ನು ಕೂಡಾ ನಿಷೇಧಿಸಬೇಕಾಗಿತ್ತದೆ ಎಂದರು.

ABOUT THE AUTHOR

...view details