ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಅಕ್ರಮ ಮಾರಾಟ ಪ್ರಕರಣದಲ್ಲಿ ನಗರದ ವೈದ್ಯೆ ಪುಷ್ಪಿತಾ ಹಾಗೂ ಪ್ರೇಮಾ ಎನ್ನುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 52ನೇ ಸಿ.ಸಿ.ಹೆಚ್ ನ್ಯಾಯಾಲಯ ತಿರಸ್ಕರಿಸಿದೆ.
ಕೋವಿಡ್ ವ್ಯಾಕ್ಸಿನ್ ಅಕ್ರಮ ಮಾರಾಟ ಪ್ರಕರಣ: ವೈದ್ಯೆಯ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ವ್ಯಾಕ್ಸಿನ್ ಕದ್ದು ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದ ಪ್ರಕರಣದಲ್ಲಿ ವೈದ್ಯೆ ಪುಷ್ಪಿತಾ ಹಾಗೂ ಪ್ರೇಮಾ ಎನ್ನುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 52ನೇ ಸಿ.ಸಿ.ಹೆಚ್ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲೆ ನಿರ್ಮಲರಾಣಿ, ವೈದ್ಯೆಯ ಸಹಿತ ಇಬ್ಬರು ಆರೋಪಿಗಳನ್ನ ಬಂಧಿಸಿದ್ದ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ಪರವಾಗಿ ವಾದ ಮಂಡಿಸಿದ್ದರು. ಪುಷ್ಪಿತಾ(25) ಹಾಗೂ ಪ್ರೇಮಾ (34) ಬಂಧಿತ ಆರೋಪಿಗಳಾಗಿದ್ದು, ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿದ್ದ ಪುಷ್ಪಿತಾ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು.
ವ್ಯಾಕ್ಸಿನ್ ಕದ್ದು ರಾಜಧಾನಿಯ ಅನ್ನಪೂರ್ಣೇಶ್ವರಿ ನಗರದ ಪ್ರೇಮಾ ಎನ್ನುವವರ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದ ವೈದ್ಯೆ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನ್ ನೀಡುತ್ತಿದ್ದಳು ಎನ್ನಲಾಗಿದೆ.