ಬೆಂಗಳೂರು :ಕೊರೊನಾವನ್ನ ಕಂಟ್ರೋಲ್ ಮಾಡಲು ದೇಶಾದ್ಯಂತ ಜನವರಿ 16 ರಿಂದ ಕೋವಿಡ್ ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದೆ.
ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯ್ತು. ಬಳಿಕ ಫ್ರಂಟ್‌ಲೈನ್ ವರ್ಕರ್ಸ್ಗಳಾದ ಪೊಲೀಸ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಯ್ತು.
ಇದಾದ ನಂತರ ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕಾ ಅಭಿಯಾನ ಶುರುವಾಗಿದೆ.
ಮೂರನೇ ಹಂತದಲ್ಲಿ ಎಷ್ಟು ಜನಕ್ಕೆ ಸಿಕ್ತು ವ್ಯಾಕ್ಸಿನ್.. ಆದರೆ, ವ್ಯಾಕ್ಸಿನ್ ಕೊರತೆ ಉಂಟಾದ ಹಿನ್ನೆಲೆ ಲಸಿಕಾ ಕೇಂದ್ರಕ್ಕೆ ಆಗಮಿಸದಂತೆ ಸರ್ಕಾರ ಜನರಿಗೆ ಮನವಿ ಮಾಡಿತ್ತು. ಸದ್ಯ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಕೊರೊನಾ ಲಸಿಕೆ ಸರಬರಾಜು ಆಗಿದ್ದು, ಇದೀಗ ನೋಂದಣಿ ಮಾಡಿಕೊಂಡಿರುವ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಮೂರನೇ ಹಂತ ಲಸಿಕೆ ನೀಡಲಾಗುತ್ತಿದೆ.
115 ದಿನಗಳಲ್ಲಿ ರಾಜ್ಯದಲ್ಲಿ ಇಲ್ಲಿ ತನಕ 1,06,08,539 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ನಲ್ಲಿ ಆರೋಗ್ಯ ಕಾರ್ಯಕರ್ತರು 6,91,756 ಮಂದಿ ಎರಡನೇ ಡೋಸ್ 4,49,183 ಮಂದಿ ಪಡೆದಿದ್ದಾರೆ. ಇನ್ನು, ಮುಂಚೂಣಿ ಕಾರ್ಯಕರ್ತರು 4,63,175 ಎರಡನೇ ಡೋಸ್ ಲಸಿಕೆಯನ್ನ 1,80,286 ಮಂದಿ ಪಡೆದಿದ್ದಾರೆ.
ಹಿರಿಯ ನಾಗರಿಕರು ಮೊದಲ ಡೋಸ್ನಲ್ಲಿ 84,92,968 ಎರಡನೇ ಡೋಸ್ ನ 21,15,571 ಮಂದಿ ಪೂರ್ಣ ಗೊಳ್ಳಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿದ್ದ 45 ವರ್ಷ ಮೇಲ್ಪಟ್ಟವರ ಮೊದಲ ಡೋಸ್ 73,20,518 ಮಂದಿ, ಎರಡನೇ ಡೋಸ್ ಲಸಿಕೆಯನ್ನು 14,86,102 ಜನರು ಪಡೆದಿದ್ದಾರೆ.
ಇನ್ನು, ರಾಜ್ಯದಲ್ಲಿ 18-44 ವರ್ಷದೊಳಗಿನ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ 17,519 ಮಂದಿ ಮೊದಲ ಡೋಸ್ ನೀಡಲಾಗಿದೆ. ಇಂದು ಮೂರನೇ ಹಂತ ಲಸಿಕಾ ಕಾರ್ಯಕ್ರಮದಲ್ಲಿ 6,737 ಮಂದಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.