ಕರ್ನಾಟಕ

karnataka

ETV Bharat / city

COVID update: ರಾಜ್ಯದಲ್ಲಿಂದು 12,209 ಮಂದಿಗೆ ಕೊರೊನಾ ದೃಢ.. 320 ಸೋಂಕಿತರು ಬಲಿ - ರಾಜ್ಯದಲ್ಲಿ ಪಾಸಿಟಿವಿಟಿ ದರ

ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಸೋಂಕಿತರ ಸಂಖ್ಯೆ 12,209 ಮಂದಿಗೆ ಕೊರೊನಾ ವಕ್ಕರಿಸಿದ್ದು, 320 ಮಂದಿ ಉಸಿರು ಚೆಲ್ಲಿದ್ದಾರೆ.

today-karnataka-state-corona-update-news
ರಾಜ್ಯದಲ್ಲಿಂದು ಕೊರೊನಾ

By

Published : Jun 6, 2021, 7:17 PM IST

ಬೆಂಗಳೂರು:ರಾಜ್ಯದಲ್ಲಿ ಇಂದೂ ಕೂಡ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, 12,209 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,95,523ಕ್ಕೆ ಏರಿಕೆ ಆಗಿದೆ.

ಓದಿ: ಬೈಕ್​​-ಕಾರಿನ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ

25,659 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 24,09,417 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2,54,505 ರಷ್ಟು ಇದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಇದೇ ಮೊದಲ ಬಾರಿಗೆ 7.71% ಇಳಿಕೆಯಾಗಿದೆ. ಸಾವಿನ‌ ಶೇಕಡವಾರು ಪ್ರಮಾಣ 2.62 % ರಷ್ಟು‌ ಇದೆ.‌ ಕೋವಿಡ್​​ಗೆ 320 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 31,580ಕ್ಕೆ ಏರಿದೆ.

ಬೆಂಗಳೂರಲ್ಲೂ ಸಹ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, 2944 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 11,83,126 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 10,224 ಗುಣಮುಖರಾಗಿದ್ದು, 10,50,910 ಜನರು ಡಿಸ್ಚಾರ್ಜ್ ಆಗಿದ್ದಾರೆ.‌ 187 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 14,875 ಕ್ಕೆ ಏರಿಕೆ ಆಗಿದೆ. ಸದ್ಯ 14,875 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details