ಬೆಂಗಳೂರು:ರಾಜ್ಯದಲ್ಲಿಂದು 5,083 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಈ ಪೈಕಿ 38 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,698 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರವು 0.74% ರಷ್ಟಿದೆ. 52 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 39,04,101 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,055 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1500 ರಷ್ಟಿದೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ 5281 ಪ್ರಯಾಣಿಕರನ್ನ ತಪಾಸಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 36 ಮಂದಿಗೆ ಸೋಂಕು ತಗುಲಿದ್ದು, 17,81,804 ಕ್ಕೆ ಏರಿಕೆ ಆಗಿದೆ. 34 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,63,442 ಏರಿಕೆ ಕಂಡಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,961 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,400 ರಷ್ಟಿದೆ.