ಬೆಂಗಳೂರು: ರಾಜ್ಯದಲ್ಲಿಂದು 21,215 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದಾಗ, ಇದರಲ್ಲಿ 42 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,401ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರ 0.19% ರಷ್ಟಿದೆ. 104 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 39,03,651 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1656 ರಷ್ಟಿದೆ. ಸೋಂಕಿಗೆ ಒಬ್ಬ ಸೋಂಕಿತ ಮೃತಪಟ್ಟಿದ್ದು ಸಾವಿನ ಸಂಖ್ಯೆ 40,052 ಏರಿಕೆ ಕಂಡಿದೆ. ಡೆತ್ ರೇಟ್ 2.38% ರಷ್ಟಿದೆ.
ರಾಜ್ಯದಲ್ಲಿಂದು 42 ಮಂದಿಗೆ ಕೋವಿಡ್ ಸೋಂಕು ದೃಢ, ಒಬ್ಬ ಸೋಂಕಿತ ಬಲಿ - ಕೊವಿಡ್ ವರದಿ
Karnataka COVID report.. ರಾಜ್ಯದಲ್ಲಿಂದು 42 ಮಂದಿಗೆ ಸೋಂಕು ದೃಢವಾಗಿದ್ದು, ಒಬ್ಬ ಸೋಂಕಿತ ಮೃತಪಟ್ಟಿದ್ದಾನೆ. ಕೊರೊನಾ ಪಾಸಿಟಿವ್ ದರವು 0.19% ರಷ್ಟಿದೆ.
ಕೊವಿಡ್ ವರದಿ
ವಿಮಾನ ನಿಲ್ದಾಣದಿಂದ 3,293 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 36 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,81,548 ಕ್ಕೆ ಏರಿಕೆ ಆಗಿದೆ. 71 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,63,084 ಏರಿಕೆ ಕಂಡಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,960 ರಷ್ಟಿದ್ದರೆ, ಸಕ್ರಿಯ ಪ್ರಕರಣಗಳು 1,503 ರಷ್ಟಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
- ಅಲ್ಪಾ- 156
- ಬೀಟಾ-08
- ಡೆಲ್ಟಾ ಸಬ್ ಲೈನೇಜ್- 4620
- ಇತರೆ- 311
- ಒಮಿಕ್ರಾನ್- 3081
- BAI.1.529- 828
- BA1- 98
- BA2- 2155
ಇದನ್ನೂ ಓದಿ:ಕೇಸ್ ದಾಖಲಿಸಿ ಸಭಾಪತಿ ಪೀಠಕ್ಕೆ ಅಪಮಾನ: 48 ಗಂಟೆಗಳಲ್ಲಿ ಕ್ರಮ- ಸಿಎಂ ಬೊಮ್ಮಾಯಿ