ಇದು ಒಳ್ಳೇ ಸುದ್ದಿ.. ಕುಗ್ಗಿದ ಕೊರೊನಾ ಹರಡುವ ಸೂಚ್ಯಂಕ.. ರಾಜ್ಯದಲ್ಲಿ 'ಆರ್ ನಂಬರ್' ಇಳಿಕೆ.. - ಸೋಂಕು ಹರಡುವ ಸೂಚ್ಯಂಕ
'R ನಂಬರ್' ಕೊರೊನಾ ಸೋಂಕು ಹರಡುವ ಸೂಚ್ಯಂಕವಾಗಿದೆ. ರೀ ಪ್ರೊಡಕ್ಟೀವ್ ನಂಬರ್ ಎಂದು ಹೇಳಲಾಗುತ್ತದೆ. ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಹೆಚ್ಚಿದ್ದರೆ, ಕರ್ನಾಟಕದಲ್ಲಿ R ನಂಬರ್ ಇಳಿಕೆ ಕಂಡಿದೆ..
ರಾಜ್ಯದಲ್ಲಿ ಇಳಿಕೆ ಕಂಡ 'ಆರ್ ನಂಬರ್'
By
Published : Dec 25, 2021, 6:54 PM IST
ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹೆಚ್ಚುತ್ತಿದೆ. ಪಕ್ಕದ ಕೇರಳ, ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಹೆಚ್ಚಾಗುತ್ತಿದೆ. ಆದರೆ, ಇದೀಗ ಕರ್ನಾಟಕಕ್ಕೆ ಮೂರನೇ ಅಲೆ ಕಂಟಕ ಎದುರಾಗಿದೆ. ಕರ್ನಾಟಕದಲ್ಲಿ ಡೆಲ್ಟಾ ನಂತರ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದರೂ ಸಹ R ನಂಬರ್ ಇಳಿಕೆ ಕಂಡಿದೆ.
R ನಂಬರ್?
'R ನಂಬರ್' ಕೊರೊನಾ ಸೋಂಕು ಹರಡುವ ಸೂಚ್ಯಂಕವಾಗಿದೆ. ರೀ ಪ್ರೊಡಕ್ಟೀವ್ ನಂಬರ್ ಎಂದು ಹೇಳಲಾಗುತ್ತದೆ. ಆರ್ ನಂಬರ್, ಒಬ್ಬರಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತಿದೆ ಎಂಬುದನ್ನು ತಿಳಿಸುವ ಸೂಚ್ಯಂಕವಾಗಿದೆ. ಅಂದಹಾಗೇ ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಸಂಖ್ಯೆ ಹೆಚ್ಚಿದ್ದರೆ, ಇತ್ತ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆ ಕಂಡಿದೆ.
ರಾಜ್ಯದಲ್ಲಿ ಇಳಿಕೆ ಕಂಡ 'ಆರ್ ನಂಬರ್'
ನವೆಂಬರ್ ಮೊದಲ ವಾರಕ್ಕೆ ಹೋಲಿಸಿದರೆ ಡಿಸೆಂಬರ್ ಮೂರನೇ ವಾರದಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ. ದೇಶದ ಬಿಹಾರ, ಯುಪಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ, ತೆಲಂಗಾಣದಲ್ಲಿ ಆರ್ ನಂಬರ್ ಹೆಚ್ಚಳವಾಗಿದೆ.