ಬೆಂಗಳೂರು: ರಾಜ್ಯದಲ್ಲಿಂದು 9,058 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,51,481ಕ್ಕೆ ಏರಿಕೆಯಾಗಿದೆ. ಇಂದು 135 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ 5,837 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿಂದು 9058 ಮಂದಿಗೆ ಕೋವಿಡ್ ಪಾಸಿಟಿವ್ : 135 ಮಂದಿ ಸೋಂಕಿಗೆ ಬಲಿ - ಕೋವಿಡ್-19
ಆರೋಗ್ಯ ಇಲಾಖೆ ರಾಜ್ಯ ಕೊರೊನಾ ವರದಿಯನ್ನು ಬಿಡುಗಡೆ ಮಾಡಿದ್ದು, ಇಂದು 9,058 ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. 5,159 ಮಂದಿ ಗುಣಮುಖರಾಗಿದ್ದು, 135 ಸೋಂಕಿತರ ಸಾವನ್ನಪ್ಪಿದ್ದಾರೆ.

ಕೊರೊನಾ ವರದಿ
ಇಂದು 5,159 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ 2,54,626 ಮಂದಿ ಚೇತರಿಸಿಕೊಂಡಿದ್ದಾರೆ. 90,999 ಸಕ್ರಿಯ ಪ್ರಕರಣಗಳಿವೆ. 762 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 83,670 ಮಂದಿಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಇಂದು 2,967 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 40 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 1,32,092 ಕ್ಕೆ ಏರಿಕೆಯಾಗಿದ್ದು, 38,906 ಸಕ್ರಿಯ ಪ್ರಕರಣಗಳಿವೆ.
Last Updated : Sep 1, 2020, 10:23 PM IST