ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಇಬ್ಬರು ಮತ್ತು ನಿನ್ನೆ 7 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈಗಾಗಲೇ ಒಮಿಕ್ರಾನ್ ಕೇಸ್ಗಳು ಕಂಡುಬಂದ ದೇಶಗಳಿಂದ ಬರುವ ಪ್ರಯಾಣಿಕನ್ನ ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ತಪಾಸಣೆ ಒಳಪಡಿಸಲಾಗುತ್ತಿದೆ. ಇಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಫ್ರಾಂಕ್‌ಫರ್ಟ್ ನಿಂದ ಮತ್ತೊಬ್ಬರು ಅಬುಧಾಬಿಯಿಂದ ಆಗಮಿಸಿದ್ದಾರೆ.