ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಬಹುತೇಕ ನಿರ್ಬಂಧಗಳನ್ನು ಸಡಿಲಗೊಳಿಸಿ ಮಾರ್ಗಸೂಚಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ರಂಗಮಂದಿರ, ಪಬ್ ಸೇರಿ ಎಲ್ಲೆಡೆ ಶೇ.100ರಷ್ಟು ಅವಕಾಶ ಸೇರಿ ಎಲ್ಲವೂ ವಿಸ್ತರಣೆಯಾಗಲಿದೆ.
ಹೀಗಾಗಿ, ರಾಜ್ಯಾದ್ಯಂತ ಅಕ್ಟೋಬರ್ 25ರ ಬೆಳಗ್ಗೆ 6 ಗಂಟೆವರೆಗೆ ಹಾಲಿ ಮಾರ್ಗಸೂಚಿಗಳೇ ಅನ್ವಯವಾಗಲಿವೆ. ಇದರ ಪ್ರಕಾರ 5ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಮುಂದುವರೆಯಲಿವೆ.
ಅದೇ ರೀತಿ ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಜಾತ್ರೆ, ಧಾರ್ಮಿಕ ಉತ್ಸವ, ಮೆರವಣಿಗೆಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆ ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ವೇಳೆಯೂ ಸಾರ್ವಜನಿಕ ಮೆರವಣಿಗೆಗೆ ಅವಕಾಶವಿಲ್ಲ. ಜೊತೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಜನರು ಭಾಗವಹಿಸಿ ಪ್ರಾರ್ಥನೆ ಅಥವಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.