ಕರ್ನಾಟಕ

karnataka

ETV Bharat / city

ಕೊರೊನಾದಿಂದ ಪೊಲೀಸರ ರಕ್ಷಣೆಗೆ ಹೊಸ ಪ್ಲಾನ್: ಮಾರ್ಗಸೂಚಿಯಲ್ಲಿ ಏನೆಲ್ಲಾ ಇದೆ ಗೊತ್ತಾ? - ಕೊರೊನಾ ವಾರಿಯರ್ಸ್

ದೈನಂದಿನ ಪೊಲೀಸ್ ಚಟುವಟಿಕೆ ಕೈಪಿಡಿಯೊಂದನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಕೊರೊನಾದಿಂದ ರಕ್ಷಿಸಿಕೊಳ್ಳಲು ಸಿಬ್ಬಂದಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ.

covid guidelines booklet released for police staff
ಇಶಾ ಪಂತ್​​

By

Published : Aug 7, 2020, 5:22 PM IST

Updated : Aug 7, 2020, 5:39 PM IST

ಬೆಂಗಳೂರು: ಕೊರೊನಾ ವಾರಿಯರ್ಸ್​ ಆಗಿ ದಿನನಿತ್ಯ ಕೆಲಸದಲ್ಲಿ ನಿರತರಾಗಿರುವ ಪೊಲೀಸ್​ ಸಿಬ್ಬಂದಿಯ ರಕ್ಷಣೆಗೆ ಹಿರಿಯ ಅಧಿಕಾರಿಗಳು ಪಣ ತೊಟ್ಟಿದ್ದಾರೆ. ನೂತನ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​​ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್​​ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕೊರೊನಾದಿಂದ ರಕ್ಷಿಸಿಕೊಳ್ಳಲು ಸಲಹೆ - ಮಾರ್ಗಸೂಚಿಗಳಿರುವ ಕೈಪಿಡಿಯೊಂದನ್ನು ಸಿಬ್ಬಂದಿಗೆ ನೀಡಿದ್ದಾರೆ.

ಈ ಕುರಿತು ಇಶಾ ಪಂತ್​​ ಮಾತನಾಡಿ, ನಾವು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪೊಲೀಸರ ಆರೊಗ್ಯದ ದೃಷ್ಟಿಯಿಂದ ಈ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಕೆಲವು ಸಿಬ್ಬಂದಿಗೆ ಕೊರೊನಾ ಬಗ್ಗೆ ಭಯ, ಆತಂಕ, ಗೊಂದಲ ಇದೆ. ಆದರೆ ಈ ದೈನಂದಿನ ಪೊಲೀಸ್ ಚಟುವಟಿಕೆ ಕೈಪಿಡಿಯಲ್ಲಿ ಪ್ರತಿಯೊಂದಕ್ಕೂ ಪರಿಹಾರ ಇದೆ ಎಂದು ತಿಳಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್​​

ಕರ್ತವ್ಯದ ವೇಳೆ ಪೊಲೀಸ್​ ಸಿಬ್ಬಂದಿ ಪಾಲಿಸಬೇಕಾದ ಮಾರ್ಗಸೂಚಿಗಳು:

  • ಠಾಣೆಯಲ್ಲಿ ಹಾಜರಾತಿ ತೆಗೆದುಕೊಳ್ಳುವ ಸಮಯದಲ್ಲಿ ಸಾಮಾಜಿಕ ಅಂತರ ಪಾಲನೆ
  • ಗುಣಮಟ್ಟದ ಮಾಸ್ಕ್ ಧರಿಸುವುದು
  • ಎಲ್ಲ ಠಾಣೆಗಳಲ್ಲಿ ಸಾಮಾಜಿಕ ಅಂತರದ ಮಾರ್ಕ್ ಮಾಡುವುದು
  • ಠಾಣೆಗಳಲ್ಲಿ ಸಿಬ್ಬಂದಿ ಗುಂಪು ಗುಂಪಾಗಿ ಸೇರುವಂತಿಲ್ಲ
  • ಹೊರಗಡೆ ಕರ್ತವ್ಯನಿರತ ಸಿಬ್ಬಂದಿ ನೇರವಾಗಿ ಮನೆಗೆ ಹೋಗಬೇಕು
  • ಯಾವುದೇ ಸಂಬಂಧಿಕರ ಮನೆ ಸ್ನೇಹಿತರ ಮನೆ ಇತರ ಸ್ಥಳಗಳಿಗೆ ಹೋಗಬಾರದು
  • ಸ್ಥಳಕ್ಕೆ ಅನುಗುಣವಾಗಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು
  • ಸಿಬ್ಬಂದಿ ಪ್ರತಿದಿನ ಮನೆಯಿಂದಲೇ ಊಟ-ತಿಂಡಿ ತರಬೇಕು
  • ಹೊರಗಿನ ಪದಾರ್ಥಗಳಿಗೆ ಅವಲಂಬಿತರಾಗಬಾರದು
  • ಉಪವಾಸದ ನಿಯಮ ಪಾಲಿಸಬಾರದು
  • ಪೌಷ್ಠಿಕ ಆಹಾರವನ್ನು ಸೇವಿಸಿ
  • ದೈಹಿಕ ವ್ಯಾಯಾಮ, ಯೋಗ ಮಾಡಿ
  • ಒಂದು ವೇಳೆ ಆರೋಗ್ಯ ಕೆಟ್ಟಲ್ಲಿ ಹಿರಿಯ ಅಧಿಕಾರಿಗೆ ತಿಳಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು
  • ಆರೋಗ್ಯ ಸಂಬಂಧಪಟ್ಟ ಸಲಹೆ ಸೂಚನೆಗಳನ್ನು ಸಿಬ್ಬಂದಿಗೆ ವಾಟ್ಸಾಪ್ ಗ್ರೂಪ್ ಮೂಲಕ ಅಧಿಕಾರಿಗಳು ತಿಳಿಸಬೇಕು
  • ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಆರೋಪಿಯನ್ನ ಬಂಧಿಸುವುದನ್ನು ಕಡಿತಗೊಳಿಸಬೇಕು
  • ಗಂಭೀರ ಪ್ರಕರಣದ ಆರೋಪಿಗಳ ತನಿಖೆಗೆ ಸಿಸಿಟಿವಿ ಕ್ಯಾಮರಾ ಬಳಕೆ ಮಾಡುವುದು
  • ಪೊಲೀಸರು ಬೇರೆ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಾರದು
  • ಠಾಣಾ ಸಿಬ್ಬಂದಿ ಬಿಡುವಿನ ಸಂಧರ್ಭದಲ್ಲಿ‌ ಒಬ್ಬರ ಫೋನ್​ನಲ್ಲಿ ಇನ್ನೊಬ್ಬರು ಮಾತನಾಡುವ ವೇಳೆ ಲೌಡ್​ ಸ್ಪೀಕರ್ ಆನ್​ ಮಾಡಬೇಕು
  • ಸಾರ್ವಜನಿಕರ ಸಮಸ್ಯೆಯನ್ನ ಇಮೇಲ್, ವಾಟ್ಸಪ್ ಅಥವಾ ಡಯಲ್ 100 ಮೂಲಕ ದೂರು ತೆಗೆದುಕೊಳ್ಳುವ ಕಡೆ ಗಮನ ಕೊಡಬೇಕು
  • ಜನಸಂದಣಿ ಪ್ರದೇಶಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಹೋಗದಂತೆ ತಡೆಯುವುದು
  • ಗರ್ಭಿಣಿ ಸಿಬ್ಬಂದಿಗೆ ಕಚೇರಿಯಲ್ಲಿ ಕಂಪ್ಯೂಟರ್ ಅಥವಾ ಹೆಲ್ಪ್​​ಲೈನ್​ ಕರ್ತವ್ಯಕ್ಕೆ ನೇಮಕ‌ ಮಾಡಬೇಕು
  • ಒಬ್ಬ ಸಿಬ್ಬಂದಿ ಬಳಸಿದ ಹಾಸಿಗೆ, ನೀರಿನ ಬಾಟಲ್, ಚಮಚ, ಬಾಕ್ಸ್ ಸೇರಿದಂತೆ ಇತರ ವಸ್ತುಗಳನ್ನು ಇನ್ನೊಬ್ಬ ಸಿಬ್ಬಂದಿ ಬಳಕೆ ಮಾಡಬಾರದು
  • ಸಿಬ್ಬಂದಿ ಚಿನ್ನದ ನೆಕ್ಲೇಸ್, ಕಿವಿ ಓಲೆ, ಬಳೆ, ಉಂಗುರಗಳ ಬಳಕೆ ಮಾಡಬಾರದು. ಯಾಕಂದ್ರೆ ಅವುಗಳ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆ
  • ಶೂಗಳನ್ನು ನಿತ್ಯ ಒಣಗಿಸಿ ಹಾಕಿಕೊಂಡು ಬರಬೇಕು
  • ಠಾಣಾಧಿಕಾರಿಗಳು ತಕ್ಕಮಟ್ಟಿಗೆ ಕ್ಯಾಪ್ ಧರಿಸುವುದನ್ನು ಕಡಿಮೆ ಮಾಡಬೇಕು
  • ಠಾಣೆಗಳಲ್ಲಿ ಕುಡಿಯಲು, ಕೈಕಾಲು ತೊಳೆಯಲು ಬಿಸಿ ನೀರನ್ನು ಒದಗಿಸಬೇಕು
  • ಯಾವುದೇ ಸಿಬ್ಬಂದಿಗೆ ಪಾಸಿಟಿವ್ ಬಂದರೂ ಭಯ ಪಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು

ಈ ನಿಯಮಗಳನ್ನು ಸಿಬ್ಬಂದಿ ಉಲ್ಲಂಘಿಸಿದರೆ ಠಾಣಾಧಿಕಾರಿ ಕ್ರಮ ತೆಗೆದುಕೊಳ್ಳಬಹುದು. ಹಾಗೆ ಈ ಎಲ್ಲಾ ನಿಯಮಗಳನ್ನು ಹಿರಿಯ ಅಧಿಕಾರಿಗಳು ಸಹಿತ ಪಾಲಿಸಬೇಕು ಎಂದು ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಸಿಪಿ-ಎಸಿಪಿ ಕಚೇರಿಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು:

  • ಡಿಸಿಪಿ‌-ಎಸಿಪಿ ಅಧೀನದಲ್ಲಿ ಬರುವ ಠಾಣೆಗೆ ಟರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು
  • ಕಂಟೈನ್ಮೆಂಟ್ ಝೋನ್​​ನ ಸಿಬ್ಬಂದಿ ಅಥವಾ ಅಧಿಕಾರಿ ಆದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುವುದು ಅಥವಾ ಭಾಗಿಯಾಗುವುದು

ಹೊಯ್ಸಳ ಸಿಬ್ಬಂದಿ ಜಾಗೃತರಾಗಿರಬೇಕು:

ಹೊಯ್ಯಳ ಸಿಬ್ಬಂದಿ ಪ್ರತಿ ಕಡೆಗೆ ರೌಂಡ್ಸ್ ಹೊಡೆಯುತ್ತಿರುವ ಕಾರಣ ಆದಷ್ಟು ಮುಂಜಾಗೃತಾ ಕ್ರಮ ವಹಿಸಬೇಕು. ಕಂಟೈನ್ಮೆಂಟ್ ಝೋನ್​​ಗಳಲ್ಲಿ ಹೆಚ್ಚಾಗಿ ವಾಕಿಗಳನ್ನ ಬಳಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದು ಒಳ್ಳೆಯದು ಎಂದು ತಿಳಿಸಲಾಗಿದೆ.

Last Updated : Aug 7, 2020, 5:39 PM IST

ABOUT THE AUTHOR

...view details