ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ 15,617 ಜನರಿಗೆ ಕೋವಿಡ್​.. ಗೌರವ್ ಗುಪ್ತಾ ಹೇಳಿದ್ದೇನು?

ಬೆಂಗಳೂರಿನಲ್ಲಿ ನಿನ್ನೆ ಹತ್ತು ಸಾವಿರದ ಗಡಿ ದಾಡಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು ಹದಿನೈದು ಸಾವಿರದ ಗಡಿ ದಾಟಿದೆ‌. ಕೋವಿಡ್​ ಹೆಚ್ಚಳ, ಸೋಂಕು ತಡೆಗಟ್ಟಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

gourav gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

By

Published : Jan 12, 2022, 12:55 PM IST

ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿದೆ. ನಿನ್ನೆ 10,800 ಜನರಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಇಂದು 15,617 ಜನರಿಗೆ ಕೋವಿಡ್​ ಪಾಸಿಟಿವ್​ ವರದಿ ಬಂದದೆ. ಸಂಜೆ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್​ನಲ್ಲಿ ಅಧಿಕೃತವಾಗಿ ಈ ಸಂಖ್ಯೆ ಪ್ರಕಟವಾಗಲಿದೆ.

ನಿನ್ನೆ ಹತ್ತು ಸಾವಿರದ ಗಡಿ ದಾಡಿದ್ದ ಪ್ರಕರಣಗಳ ಸಂಖ್ಯೆ ಇಂದು ಹದಿನೈದು ಸಾವಿರದ ಗಡಿ ದಾಟಿದೆ‌. ಒಂದೇ ದಿನದಲ್ಲಿ 4,817 ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೊನಾ ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿಕೆಯಾಗಿದೆ.

ಸೋಂಕು ತಡೆಗೆ ಮಾಸ್ಕ್​ ಸಾಧನ:

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ಹದಿನೈದು ಸಾವಿರ ಪ್ರಕರಣಗಳು ದಾಖಲಾಗಿದೆ. ಈ ಸಂಖ್ಯೆ ಮುಂದಿನ ದಿನ ಇನ್ನೂ ಹೆಚ್ಚಾಗಲಿದೆ. ಯುಎಸ್, ಯುಕೆ ಸೇರಿದಂತೆ ಮುಂಬೈ, ದೆಹಲಿಯಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕಿನ ಹರಡುವಿಕೆ ತಡೆಯಲು ಸದ್ಯ ಮಾಸ್ಕ್ ಮಾತ್ರ ಸಾಧನ‌ ಎಂದರು.

ಸೋಂಕು ತಡೆಗಟ್ಟಲು ಕ್ರಮ ವಹಿಸಬೇಕಿದೆ:

ಸೋಂಕು ಬಂದರೂ ಶೇ.90ರಷ್ಟು ಜನರಿಗೆ ಆಸ್ಪತ್ರೆ ಅಗತ್ಯ ಬೀಳುವುದಿಲ್ಲ. ಟ್ರಯಾಜಿಂಗ್ ಸೆಂಟರ್​ಗಳಲ್ಲಿ ಪರೀಕ್ಷಿಸಿಕೊಂಡರೆ ಸಾಕು. ಟೆಲಿ ಟ್ರಯಾಜಿಂಗ್ ಕೂಡಾ ಮಾಡಲಾಗುವುದು. ಬರುವ ದಿನಗಳಲ್ಲಿ ಕೋವಿಡ್​​ಗೆ ಸೀಮಿತವಾಗುವ ಆಸ್ಪತ್ರೆಗಳು, ಬೆಡ್​ಗಳ ಸಂಖ್ಯೆ ಹೆಚ್ಚಿಸಲಾಗುವುದು. ಕೋವಿಡ್ ಕೇರ್ ಸೆಂಟರ್​ಗಳನ್ನು ಕೂಡಾ ಹೆಚ್ಚು ಮಾಡಲಾಗುತ್ತದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಕಳೆದ ಎರಡು ಕೋವಿಡ್ ಅಲೆಗಳಂತೆ ಸದ್ಯ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಉಂಟಾಗುವುದಿಲ್ಲ. ಅಪಾರ್ಟ್​​ಮೆಂಟ್ ಓನರ್ಸ್, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಜವಾಬ್ದಾರಿ ವಹಿಸಿಕೊಂಡು ಸೋಂಕು ತಡೆಗಟ್ಟಲು ಕ್ರಮ ವಹಿಸಬೇಕಿದೆ ಎಂದರು.

ಲಾಕ್​ಡೌನ್?:ನಿನ್ನೆ ಸಿಎಂ ಜೊತೆ ನಡೆದ ಸಭೆಯಲ್ಲಿ ಲಾಕ್​ಡೌನ್ ಕುರಿತು ಚರ್ಚೆಯಾಗಿಲ್ಲ. ಹೊರರಾಜ್ಯದಿಂದ ಬರುತ್ತಿರುವ ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೆಡೆ ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದರೆ ಮೈಕ್ರೋ ಕಂಟೈನ್​ಮೆಂಟ್ ಮಾಡಲಾಗುವುದು. ನಗರದಲ್ಲಿ ಸದ್ಯ 300ಕ್ಕೂ ಹೆಚ್ಚು ಕಂಟೈನ್​ಮೆಂಟ್ ವಲಯಗಳಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಅನಿವಾರ್ಯ ಆದ್ರೆ ಲಾಕ್ ಡೌನ್, ನಮ್ಮಲ್ಲಿ ಸದ್ಯಕ್ಕೆ ಆ ಸ್ಥಿತಿ ಬಂದಿಲ್ಲ: ಆರಗ ಜ್ಞಾನೇಂದ್ರ

ABOUT THE AUTHOR

...view details