ಕರ್ನಾಟಕ

karnataka

ETV Bharat / city

ಬೆಂಗಳೂರಿನ ಒಂದೇ ಠಾಣೆಯ 14 ಪೊಲೀಸರಿಗೆ ಕೋವಿಡ್‌ - ಕರ್ನಾಟಕದಲ್ಲಿ ಕೋವಿಡ್ ಹೊಸ ಮಾರ್ಗಸೂಚಿ

ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಸಿಟಿ ಮಾರ್ಕೆಟ್ ಠಾಣೆಯ 14 ಸಿಬ್ಬಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Bengaluru police covid positive,ಬೆಂಗಳೂರಲ್ಲಿ ಕೊರೊನಾ
Bengaluru police covid

By

Published : Jan 6, 2022, 3:37 PM IST

Updated : Jan 6, 2022, 3:48 PM IST

ಬೆಂಗಳೂರು: ಕಳೆದ ಎರಡು ದಿನಗಳ ಹಿಂದಷ್ಟೇ ಬ್ಯಾಟರಾಯನಪುರ‌ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಇದೀಗ ಸಿಟಿ ಮಾರ್ಕೆಟ್‌ ಪೊಲೀಸ್ ಠಾಣೆಯ 14 ಜನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ರಾಟ್(RAT) ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗಲಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ಫೋನ್​​ ನುಂಗಿದ ಕೈದಿ

ಈ ಪೈಕಿ‌ ಓರ್ವ ಪಿಎಸ್ಐ, ಮೂವರು ಎಎಸ್ಐ ಹಾಗೂ 10 ಮಂದಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿದೆ. ಸೋಂಕಿತರನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಠಾಣೆಯಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ‌.

ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಕಠಿಣ ಮಾರ್ಗಸೂಚಿಗಳು ಇಂದಿನಿಂದ ಜಾರಿಗೆ ಬರಲಿವೆ. ಜೊತೆಗೆ, ನಾಳೆ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ.

ಇದನ್ನೂ ಓದಿ: ತಾಕತ್ತು ಎಲ್ಲರಿಗೂ ಇದೆ, ಅದನ್ನು ಈಗ ಪ್ರದರ್ಶಿಸುವುದು ಬೇಡ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Jan 6, 2022, 3:48 PM IST

ABOUT THE AUTHOR

...view details