ಕರ್ನಾಟಕ

karnataka

ETV Bharat / city

ರಾಜಧಾನಿಯಲ್ಲಿ ಹಾಸಿಗೆ ಕೊರತೆ: ಕ್ಷೇಮಾಭಿವೃದ್ಧಿ ಸಂಘಗಳಿಂದ ಕೋವಿಡ್ ಆರೈಕೆ ಕೇಂದ್ರಗಳ ನಿರ್ಮಾಣ

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುತ್ತಿರುವ ಕಾರಣದಿಂದ ಕ್ಷೇಮಾಭಿವೃದ್ಧಿ ಸಂಘಗಳೂ ಕೂಡಾ ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಾಗಿವೆ.

covid care centers
ಕೋವಿಡ್ ಕೇರ್ ಸೆಂಟರ್​

By

Published : Jul 27, 2020, 5:31 PM IST

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅದೆಷ್ಟೋ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆಗಾಗಿ ಹಾಸಿಗೆಗಳು ಸಿಗುತ್ತಿಲ್ಲ. ‌‌ಈ ನಿಟ್ಟಿನಲ್ಲಿ ಕೊರೊನಾ ರೋಗಿಗಳಿಗೆ ಕ್ಷೇಮಾಭಿವೃದ್ಧಿ ಸಂಘಗಳಿಂದ ಆರೈಕೆ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ.

ಬಿಬಿಎಂಪಿ, ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ನಗರದ ನಾಲ್ಕು ಕಡೆ 20 ಹಾಸಿಗೆಯ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ.

ಕೋವಿಡ್ ಕೇರ್ ಸೆಂಟರ್​

ಬಿಬಿಎಂಪಿ ಈಗಾಗಲೇ ಸೋಂಕಿನ ಲಕ್ಷಣ ಇರುವವರಿಗೆ 2,802 ಹಾಸಿಗೆ ವ್ಯವಸ್ಥೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಿಂದ 2,122 ಹಾಸಿಗೆಗಳ ವ್ಯವಸ್ಥೆಯಾಗಿದೆ. ಇದೇ ಮಾದರಿಯಲ್ಲಿ ನಿವಾಸಿ, ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಆರೈಕೆ ಕೇಂದ್ರ ಆರಂಭಿಸಲಾಗಿದೆ.

ಯಶವಂತಪುರದ ಗೋಲ್ಡನ್ ಗ್ರ್ಯಾಂಡ್​ ಅಪಾರ್ಟ್‌ಮೆಂಟ್‌ ವತಿಯಿಂದ ಸಂಜೀವಿನಿ ಆಸ್ಪತ್ರೆಯಲ್ಲಿ 6 ಹಾಸಿಗೆ, ಶೋಭಾ ಸಿಟಿ ಕೋವಿಡ್ ಐಸೋಲೇಷನ್ ಸೆಂಟರ್​​ನಿಂದ ಕೈಟ್ ಕೇರ್ ಆಸ್ಪತ್ರೆಯಲ್ಲಿ 8 ಹಾಸಿಗೆ, ವೆಸ್ಟ್ ‌ಎಂಡ್ ಹೈಟ್ಸ್​ನಿಂದ ಅಪೋಲೋ ಆಸ್ಪತ್ರೆ ಅಕ್ಷಯ ನಗರದಲ್ಲಿ 2 ಹಾಸಿಗೆ ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ 4 ಹಾಸಿಗೆ ಸಾಮರ್ಥ್ಯದ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಎಲ್ಲಾ 20 ಹಾಸಿಗೆಗಳು ಖಾಲಿ ಇರೋದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.

ABOUT THE AUTHOR

...view details