ಬೆಂಗಳೂರು: ರಾಜ್ಯದಲ್ಲಿಂದು 12,517 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 259 ಮಂದಿಗೆ ಸೋಂಕು ದೃಢವಾಗಿದೆ. ಇಂದು 234 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ವರೆಗೆ ಒಟ್ಟು 39,10,500 ಮಂದಿ ಗುಣಮುಖರಾಗಿದ್ದಾರೆ. ಇಂದು ಮೃತಪಟ್ಟರ ಸೋಂಕಿತರ ಸಂಖ್ಯೆ ಶೂನ್ಯ. ಸದ್ಯ ಸಕ್ರಿಯ ಪ್ರಕರಣಗಳು 2,229 ರಷ್ಟಿದೆ.
ರಾಜ್ಯದಲ್ಲಿ ಇಂದು 259 ಮಂದಿಗೆ ಸೋಂಕು ದೃಢ : ಕೋವಿಡ್ ಸಾವಿನ ಸಂಖ್ಯೆ ಶೂನ್ಯ! - ರಾಜ್ಯದಲ್ಲಿ ಇಂದು 259 ಮಂದಿಗೆ ಸೋಂಕು ದೃಢ
ರಾಜ್ಯದಲ್ಲಿಂದು 12,517 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 259 ಮಂದಿಗೆ ಸೋಂಕು ದೃಢವಾಗಿದೆ. ಸಾವಿನ ಪ್ರಮಾಣ ಶೂನ್ಯವಾಗಿದೆ.
ಈ ಮೂಲಕ ಸೋಂಕಿತರ ಪ್ರಮಾಣ ಶೇ. 2.06 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 1.32 ರಷ್ಟಿದೆ. ಸಾವಿನ ಪ್ರಮಾಣ ಶೂನ್ಯವಾಗಿದೆ. ವಾರದ ಸಾವಿನ ಪ್ರಮಾಣ ಶೇ. 0.07 ರಷ್ಟಿದೆ. ವಿಮಾನ ನಿಲ್ದಾಣದಿಂದ ಇಂದು 4,211 ಮಂದಿ ತಪಾಸಣೆಗೆ ಒಳಪಟ್ಟವರು ಸೇರಿದಂತೆ ಇದುವರೆಗೂ 10,01,192 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 243 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,88,394 ಕ್ಕೆ ಏರಿಕೆ ಆಗಿದೆ. ಇಂದು 227 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,69,323 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇಂದು ಮೃತಪಟ್ಟವರ ಸಂಖ್ಯೆ ಶೂನ್ಯ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,963 ಕ್ಕೆ ಏರಿದೆ. ಇನ್ನು ಸಕ್ರಿಯ ಪ್ರಕರಣಗಳು 2107 ಇದೆ.
ಇದನ್ನೂ ಓದಿ:ಕೋವಿಡ್ ಸೋಂಕು ಸಂಖ್ಯೆ ಹೆಚ್ಚಳ: ಕರ್ನಾಟಕ ಸೇರಿ ಪಕ್ಕದ ಐದು ರಾಜ್ಯಗಳಿಗೂ ಕೇಂದ್ರದ ಪತ್ರ!