ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 783 ಹೊಸ ಕೋವಿಡ್ ಕೇಸ್ ಪತ್ತೆ: 16 ಸೋಂಕಿತರು ಸಾವು

ಕರ್ನಾಟಕದಲ್ಲಿ ಇಂದು 783 ಮಂದಿಗೆ ಕೊರೊನಾ ದೃಢಪಟ್ಟಿದೆ. 16 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

COVID
COVID

By

Published : Sep 19, 2021, 7:56 PM IST

ಬೆಂಗಳೂರು:ರಾಜ್ಯದಲ್ಲಿಂದು 1,29,874 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಈ ಪೈಕಿ 783 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,67,866 ಕ್ಕೆ ಏರಿಕೆ ಕಂಡಿದೆ. ಸದ್ಯ ಪಾಸಿಟಿವಿಟಿ ದರ ಶೇ.0.60 ರಷ್ಟಿದ್ದು, ದಿನದಿಂದ ದಿನಕ್ಕೆ ಕೋವಿಡ್ ಇಳಿಕೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

1,139 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಈವರೆಗೆ 29,14,852 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 15,383 ರಷ್ಟಿವೆ. 16 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,603 ಕ್ಕೇರಿದೆ. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ 2.04 ರಷ್ಟಿದೆ.

ಬೆಂಗಳೂರು ಕೊರೊನಾ ವರದಿ:

ಬೆಂಗಳೂರಲ್ಲಿ 267 ಜನರಿಗೆ ಸೋಂಕು ತಗುಲಿದೆ. 277 ಜನರು ಗುಣಮುಖರಾಗಿದ್ದಾರೆ. 7 ಸೋಂಕಿತರು ಮೃತರಾಗಿದ್ದಾರೆ.‌ ಸದ್ಯ ನಗರದಲ್ಲಿ 7,474 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್

1) ಡೆಲ್ಟಾ ( Delta/B.617.2) - 1653
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -8
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) - 4 ಮಂದಿ
6) ಈಟಾ (ETA/B.1.525) - 1
7) ಡೆಲ್ಟಾ ಸಬ್ ಲೈನ್ ಏಜ್ AY.4- 202
8) ಡೆಲ್ಟಾ ಸಬ್ ಲೈನ್ ಏಜ್ AY .12- 14

ABOUT THE AUTHOR

...view details