ಬೆಂಗಳೂರು:ರಾಜ್ಯದಲ್ಲಿಂದು 1,10,220 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 239 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,89,952ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 239 ಮಂದಿಗೆ ಕೋವಿಡ್: 5 ಸೋಂಕಿತರು ಬಲಿ - ಕರ್ನಾಟಕ ಕೊರೊನಾ ನ್ಯೂಸ್
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಕುರಿತು ಇಂದಿನ ಅಪ್ಡೇಟ್ಸ್..
ಇಂದು 322 ಮಂದಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 29,43,809 ಮಂದಿ ಗುಣಮುಖರಾಗಿದ್ದಾರೆ. 5 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,112 ಕ್ಕೇರಿದೆ. ಸದ್ಯ 8,002 ಸಕ್ರಿಯ ಪ್ರಕರಣಗಳಿವೆ. ಸದ್ಯ ಸೋಂಕಿತರ ಪ್ರಮಾಣ ಶೇ.0.21 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.09 ರಷ್ಟಿದೆ.
ರಾಜಧಾನಿ ಬೆಂಗಳೂರಲ್ಲಿ 151 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,52,831ಕ್ಕೆ ಏರಿದೆ. 150 ಜನರು ಗುಣಮುಖರಾಗಿದ್ದು, ಒಟ್ಟು 12,30,170 ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,295ಕ್ಕೆ ಹೆಚ್ಚಿದೆ. ಸದ್ಯ 6365 ಸಕ್ರಿಯ ಪ್ರಕರಣಗಳು ಇವೆ.