ಬೆಂಗಳೂರು: ಕೋವಿಡ್-19 ಘನತ್ಯಾಜ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋವಿಡ್-19 ರೋಗಿಗಳ ಪತ್ತೆ/ಚಿಕಿತ್ಸೆ/ಪ್ರತ್ಯೇಕವಾಗಿ ಇರಿಸುವಿಕೆಯ ಸಮಯದಲ್ಲಿ ಉತ್ಪನ್ನವಾದ ತ್ಯಾಜ್ಯಗಳ ನಿರ್ವಹಣೆ, ಉಪಚಾರ ಹಾಗೂ ವಿಲೇವಾರಿ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನೂ ಅದರಲ್ಲಿ ಪ್ರಕಟಿಸಿದೆ. ಅದರಂತೆ, ರಾಜ್ಯ ಸರ್ಕಾರ ಮನೆಯ ಆರೈಕೆಯಲ್ಲಿರುವ ಸೋಂಕಿತರಿಗೆ ಉತ್ಪಾದಿಸುವ ತ್ಯಾಜ್ಯಗಳ ನಿರ್ವಹಣೆಯ ಕುರಿತೂ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮನೆಯ ಆರೈಕೆಯಲ್ಲಿರುವ ಸೋಂಕಿತರಿಂದ ಉತ್ಪನ್ನವಾಗುವ ಘನತ್ಯಾಜ್ಯಗಳ ನಿರ್ವಹಣೆ ಮಾಡಲು ಬಿಬಿಎಂಪಿ ವಿಶೇಷ ತಂಡಗಳನ್ನು ರಚಿಸಿದೆ. ಇಂತಹ ಪ್ರಸಂಗದಲ್ಲಿ ರಾಜ್ಯದ ಎಲ್ಲ ಬಿಬಿಎಂಪಿ, ನಗರ ಸಭೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಅನುಸರಿಸಬೇಕಾದ ಕ್ರಮಗಳೇನು?:ಮನೆ ಆರೈಕೆಯಲ್ಲಿರುವ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರು ಘನ ತ್ಯಾಜ್ಯ ನಿರ್ವಹಣೆ ಮಾಡಲು ಅನುಸರಿಸಬೇಕಾದ ಹೀಗಿವೆ.ಪೀಡಿತರು ಬಳಸುವ ಮಾಸ್ಕ್ಗಳು, ಟಿಶ್ಯೂಗಳು, ಶೌಚಾಲಯ ವಸ್ತುಗಳು ಅಥವಾ ರಕ್ತ ಶರೀರದ ಸ್ರಾವಗಳಿಂದ ಮಲಿನವಾದ ಸ್ವಾಬ್ಗಳು, ಬಳಸಿದ ಸಿರಂಜ್ಗಳು, ಔಷಧಗಳು ಸೇರಿದಂತೆ ಅವುಗಳನ್ನು ಜೀವ-ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಬೇಕು. ಮತ್ತು ಶೇ.1ರಷ್ಟು ಹೈಪೋಕ್ಲೋರೆಟ್ ದ್ರಾವಣದಲ್ಲಿ ನೆನೆಸಿ ಸಿಂಪಡಿಸುವುದು ಹಾಗೂ ಮುಚ್ಚಳವಿರುವ ಪ್ರತ್ಯೇಕವಾಗಿ ಹಳದಿ ಬಣ್ಣದ ಚೀಲದಲ್ಲಿ ವಿಲೇವಾರಿ ಮಾಡಬೇಕು.
ಕಾಗದದ ಚೀಲದಲ್ಲಿ ಇಡಬೇಕು: ಸ್ಥಳೀಯ ನಾಗರಿಕ/ಬಿಬಿಎಂಪಿ ಅಧಿಕಾರಿಗಳು ಮನೆಯ ಆರೈಕೆಯಲ್ಲಿರುವ ಸೋಂಕಿತರಿಗೆ ಹಳದಿ ಬಣ್ಣದ ಚೀಲಗಳನ್ನು ಒದಗಿಸಬೇಕು ಹಾಗೂ ಅದನ್ನು ಅಧಿಕಾರಿಗಳು ವಾರಕ್ಕೆರಡು ಬಾರಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಇನ್ನು ಆರೈಕೆ ಮಾಡುವವರು ಮತ್ತು ಇತರ ಕುಟುಂಬ ಸದಸ್ಯರು ಬಳಸುವ ಮುಖ ಮಾಸ್ಕ್ ಮತ್ತು ಗ್ಲೌಸ್ಗಳನ್ನು ಮರುಬಳಕೆ ತಡೆಗಟ್ಟಲು ಸಾಮಾನ್ಯ ತ್ಯಾಜ್ಯದಂತೆ ವಿಲೇವಾರಿ ಮಾಡುವ ಮೊದಲು ಕನಿಷ್ಠ 72 ಗಂಟೆಗಳ ಕಾಲ ಕಾಗದದ ಚೀಲದಲ್ಲಿ ಇಡಬೇಕು.
ಮನೆ ಆರೈಕೆಯಲ್ಲಿರುವ ಪೀಡಿತರು ಮತ್ತು ಅವರ ಕುಟುಂಬ ಸದಸ್ಯರು ಬಳಸಿದ ಅಥವಾ ಅವರಿಂದ ಉತ್ಪನ್ನವಾದ ಉಳಿದ ಆಹಾರ, ಹಣ್ಣಿನ ರಸದ ಖಾಲಿ ಬಾಟಲಿಗಳು, ಬಳಸಿ ಬಿಸಾಡಬಹುದಾದ ಊಟದ ತಟ್ಟೆ-ಲೋಟಗಳು, ಟೆಟ್ರಾ ಪ್ಯಾಕ್ಗಳು ಕುಡಿಯುವ ನೀರಿನ ಖಾಲಿ ಬಾಟಲಿಗಳು, ಪ್ಯಾಕೇಜಿಂಗ್ ವಸ್ತುಗಳು ಅಡುಗೆ ಮನೆಯಲ್ಲಿ ಉತ್ಪನ್ನವಾದ ತ್ಯಾಜ್ಯ ನಿರುಪಯುಕ್ತ, ಕಾಗದಗಳು, ನಿರುಪಯುಕ್ತ ಪ್ಲಾಸ್ಟಿಕ್ಗಳು, ನೆಲ ಶುಚಿಗೊಸಿದಾಗ ಬಂದ ಧೂಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು.