ಕರ್ನಾಟಕ

karnataka

ETV Bharat / city

ಕೋವಿಡ್​ ಎರಡನೇ ಅಲೆ.. ಸಿಲಿಕಾನ್‌ ಸಿಟಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿದ ಏರಿಕೆ - Covid-19 second wave update

ಊಹೆಗೂ‌ ಮೀರಿ ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚಳವಾಗುತ್ತಿದೆ ಎಂದು ಬಿಬಿಎಂಪಿ ಖಚಿತ ಪಡಿಸಿದೆ..

ಕೊರೊನಾ 2ನೇ ಅಲೆ
ಕೊರೊನಾ 2ನೇ ಅಲೆ

By

Published : Apr 14, 2021, 2:39 PM IST

ಬೆಂಗಳೂರು‌: ಕೋವಿಡ್ ಮೊದಲ‌ನೇ ಅಲೆಗಿ‌ಂತ ಎರಡನೇ ಅಲೆ ತುಂಬಾ ಡೇಂಜರ್. ವೇಗವಾಗಿ ಸೋಂಕು ಹರಡುತ್ತಿರುವುದರಿಂದ ಎರಡನೇ ಅಲೆ ಅಪಾಯಕಾರಿ ಅಂತ ಬಿಬಿಎಂಪಿ ಅಂದಾಜಿಸಿದೆ.

ನಿರೀಕ್ಷೆಗೂ ಮೀರಿ 2ನೇ ಅಲೆ ಸೋಂಕು ದ್ವಿಗುಣಗೊಳ್ಳುತ್ತಿದೆ. ಮೊದಲ ಅಲೆಗೆ ಹೋಲಿಸಿದ್ರೆ ಎರಡನೇ ಅಲೆ ವೇಗ ಹೆಚ್ಚಿದೆ. ಕಳೆದ ವರ್ಷ 5 ತಿಂಗಳಲ್ಲಿ ದಾಖಲಾಗಿದ್ದ ಕೇಸ್‌ಗಳ ಸಂಖ್ಯೆ ಎರಡನೇ ಅಲ್ಲೆಯಲ್ಲಿ ಒಂದೂವರೆ ತಿಂಗಳಲ್ಲೇ ದಾಖಲಾಗಿವೆ ಎಂದು ತಿಳಿಸಿದೆ.

ಕೊರೊನಾ 2ನೇ ಅಲೆ

ಮೊದಲ ಅಲೆ ಶುರುವಾದ ಮಾರ್ಚ್ ತಿಂಗಳಲ್ಲಿ ನಗರದಲ್ಲಿ 44 ಕೇಸ್‌ಗಳು ದಾಖಲಾಗಿವೆ. 2020 ಏಪ್ರಿಲ್ ತಿಂಗಳಾಂತ್ಯಕ್ಕೆ 101ಕ್ಕೆ ಏರಿಕೆಯಾಗಿತ್ತು. ಮೇ ಅಂತ್ಯಕ್ಕೆ 386, ಜೂನ್ ವೇಳೆಗೆ 4,904 ಹಾಗೂ ಜುಲೈ ಅಂತ್ಯಕ್ಕೆ 52,406 ಸೋಂಕಿತರ ಸಂಖ್ಯೆಯಿತ್ತು.

ಆದ್ರೆ, 2021 ಕೋವಿಡ್ ಎರಡನೇ ಅಲೆ ಆರಂಭವಾದ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 31,886 ಕೇಸ್‌ ಮತ್ತು ಏಪ್ರಿಲ್‌ 15ರ ವೇಳೆಗೆ 56,136 ಕೇಸ್‌ ದಾಖಲಾಗಿವೆ.‌ ಈ‌ ತಿಂಗಳಾಂತ್ಯಕ್ಕೆ 1 ಲಕ್ಷ ಕೇಸ್ ದಾಖಲಾಗುವ ಸಾಧ್ಯತೆ ಕೂಡ ಇದೆ ಎಂದು ಬಿಬಿಎಂಪಿ ತಿಳಿಸಿದೆ.

ಊಹೆಗೂ‌ ಮೀರಿ ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚಳವಾಗುತ್ತಿದೆ ಎಂದು ಬಿಬಿಎಂಪಿ ಖಚಿತ ಪಡಿಸಿದೆ.

ABOUT THE AUTHOR

...view details