ಬೆಂಗಳೂರು:ಕೊರೊನಾ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ನಿರ್ವಸಿತರಿಗೆ ತಾತ್ಕಾಲಿಕ ಆಶ್ರಯ ತಾಣಗಳನ್ನು ಒದಗಿಸುವ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ. ನಗರ ಪ್ರದೇಶಗಳ ನಿರ್ವಸಿತರಿಗೆ ಆಶ್ರಯ ಒದಗಿಸಬೇಕು ಮತ್ತು ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರುವ ವಾದಿಸಿ, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ನಿರ್ವಸಿತರು ಮತ್ತು ನಿರ್ಗತಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ಮೊದಲನೇ ಅಲೆ ವೇಳೆ ಒದಗಿಸಿದಂತೆ ತಾತ್ಕಾಲಿಕ ರಾತ್ರಿ ಆಶ್ರಯ ತಾಣಗಳನ್ನು ನಿರ್ಮಿಸುವ ಗತ್ಯವಿದೆ. ಹಾಗೆಯೇ ಇವರಿಗೆ ಕೊರೊನಾ ತಪಾಸಣೆ ಮಾಡಿ ಹಾಗೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕಿದೆ ಎಂದರು.
ಸರ್ಕಾರದ ಪರ ವಕೀಲರು ವಾದಿಸಿ, ಸಂಬಂಧಪಟ್ಟ ಅನೇಕ ಅಧಿಕಾರಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೇಂದ್ರ ಪರಿಹಾರ ಸಮಿತಿ, ಭಿಕ್ಷುಕರ ಕಾಲೋನಿ ಸೇರಿದಂತೆ ಬೆಂಗಳೂರು ನಗರದ ಇತರೆಡೆ ಇರುವ ರಾತ್ರಿ ಆಶ್ರಯ ತಾಣಗಳು ಭರ್ತಿಯಾಗಿವೆ. ಜೊತೆಗೆ ಅಲ್ಲಿಗೆ ಭೇಟಿ ಕೊಡಲು ಅಧಿಕಾರಿಗಳು ಮತ್ತು ನಿರ್ಗಗತಿಕರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕೋವಿಡ್ 19: ನಿರ್ವಸಿತರಿಗೆ ಆಶ್ರಯ ಒದಗಿಸುವ ಕುರಿತು ನಿಲುವು ಕೇಳಿದ ಹೈಕೋರ್ಟ್ - bengalore news
ಸರ್ಕಾರದ ಪರ ವಕೀಲರು ವಾದಿಸಿ, ಸಂಬಂಧಪಟ್ಟ ಅನೇಕ ಅಧಿಕಾರಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೇಂದ್ರ ಪರಿಹಾರ ಸಮಿತಿ, ಭಿಕ್ಷುಕರ ಕಾಲೋನಿ ಸೇರಿದಂತೆ ಬೆಂಗಳೂರು ನಗರದ ಇತರೆಡೆ ಇರುವ ರಾತ್ರಿ ಆಶ್ರಯ ತಾಣಗಳು ಭರ್ತಿಯಾಗಿವೆ. ಜೊತೆಗೆ ಅಲ್ಲಿಗೆ ಭೇಟಿ ಕೊಡಲು ಅಧಿಕಾರಿಗಳು ಮತ್ತು ನಿರ್ಗಗತಿಕರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ನಿರ್ವಸಿತರಿಗೆ ಆಶ್ರಯ ಒದಗಿಸುವ ಕುರಿತು ನಿಲುವು ಕೇಳಿದ ಹೈಕೋರ್ಟ್
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ನಗರಗಳಲ್ಲಿ ಆಶ್ರಯ ತಾಣಗಳು ಇದ್ದು, ಅಲ್ಲಿ ಒಂದಿಷ್ಟು ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಮೊದಲ ಅಲೆ ವೇಳೆ ವಲಸೆ ಕಾರ್ಮಿಕರು, ನಿರ್ಗತಿಕರಿಗೆ ವ್ಯವಸ್ಥೆ ಮಾಡಿದಂತೆ ಈ ಸಂದರ್ಭದಲ್ಲೂ ನಿರ್ವಸಿತರು ಮತ್ತು ನಿರ್ಗತಿಕರಿಗೆ ತಾತ್ಕಾಲಿಕ ಆಶ್ರಯ ತಾಣಗಳ ವ್ಯವಸ್ಥೆ ಮಾಡುವ ಕುರಿತು ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.