ಕರ್ನಾಟಕ

karnataka

ETV Bharat / city

'ನ್ಯಾಯಾಲಯಗಳು ಸಹಾನುಭೂತಿ ಆಧಾರದಲ್ಲಿ ತೀರ್ಪು ನೀಡುವಂತಿಲ್ಲ' - ಹೈಕೋರ್ಟ್​

ಧಾರವಾಡ ಕೋರ್ಟ್​ ನೀಡಿದ್ದ ತೀರ್ಪಿಗೆ ಬಂದಿದ್ದ ಮೇಲ್ಮನವಿಯನ್ನು ವಿಚಾರಿಸಿದ ಹೈಕೋರ್ಟ್,​ ನ್ಯಾಯಾಲಯಗಳು ತೀರ್ಪು ನೀಡುವಾಗ ಸಹಾನುಭೂತಿಯ ಆಧಾರದಲ್ಲಿ ತೀರ್ಪು ನೀಡಬಾರದು ಎಂದು ಹೇಳಿದೆ.

ಕುಟುಂಬ ಪಿಂಚಣಿ
ಕುಟುಂಬ ಪಿಂಚಣಿ

By

Published : Jun 22, 2022, 10:11 PM IST

ಬೆಂಗಳೂರು: ನ್ಯಾಯಾಲಯಗಳು ಕೇವಲ ಕರುಣೆಯ ಆಧಾರದ ಮೇಲೆ ತೀರ್ಪುಗಳನ್ನು ಪ್ರಕಟಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್​ನ ವಿಭಾಗೀಯ ಪೀಠ ಹೇಳಿದೆ. ಮೃತ ಕೆಪಿಟಿಸಿಎಲ್ ನೌಕರರೊಬ್ಬರ ಪತ್ನಿಗೆ ಹೊಸ ಸ್ಕೀಂ ಅಡಿಯಲ್ಲಿ ಪಿಂಚಣಿ ಮಂಜೂರು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಈ ಮೂಲಕ ವಿಭಾಗೀಯ ಪೀಠವು ರದ್ದುಗೊಳಿಸಿದೆ.

ಸೆಪ್ಟೆಂಬರ್ 11, 2015ರಂದು ಶಾರದಾ ಜೆ. ಚೌಗುಲೆ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಕೋರ್ಟ್​ ಮಾನ್ಯ ಮಾಡಿತ್ತು. ಅಲ್ಲದೇ ಅರ್ಜಿದಾರರಿಗೆ ಕುಟುಂಬ ಪಿಂಚಣಿ ಯೋಜನೆಯನ್ನು ಹಾಗೂ ಪತಿಯು ಮೃತಪಟ್ಟ ದಿನಾಂಕದಿಂದ ಡಿಸೆಂಬರ್ 31, 1986 ರವರೆಗೆ ಶೇ 6ರ ಬಡ್ಡಿದರದಲ್ಲಿ ನೀಡಬೇಕೆಂದು ತಿಳಿಸಿತ್ತು. ನಂತರದ ಅವಧಿಗೆ ಶೇ 12 ರಷ್ಟು ಪರಿಷ್ಕರಿಸಿದ ಬಡ್ಡದರದಲ್ಲಿ ಪಿಂಚಣಿ ಬಾಕಿಯನ್ನು ಪಾವತಿ ಮಾಡಬೇಕೆಂದು ಕೆಪಿಟಿಸಿಎಲ್​ಗೆ ಆದೇಶಿಸಿತ್ತು. ಅಲ್ಲದೇ ಎಲ್ಲ ಬಾಕಿಗಳನ್ನು ಶೇ 18ರ ಬಡ್ಡಿದರದಲ್ಲಿ ಮೂರು ತಿಂಗಳೊಳಗೆ ಪಾವತಿಸಲು ಅವಕಾಶ ನೀಡಿತ್ತು.

ಕೆಪಿಟಿಸಿಎಲ್ ವಾದ: ಈ ವಿಚಾರವಾಗಿ ಕೆಪಿಟಿಸಿಎಲ್ ಹೈಕೋರ್ಟ್​ಗೆ ಮನವಿ ಸಲ್ಲಿಸಿತ್ತು.ಶಾರದಾ ಚೌಗುಲೆ ಅವರ ಪತಿ ಜನಾರ್ದನ ಡಿ. ಚೌಗುಲೆ ಇವರು ಡಿಸೆಂಬರ್ 18, 1974 ರಿಂದ ಕರ್ತವ್ಯದಲ್ಲಿದ್ದರು. ಇವರು ಕರ್ತವ್ಯದಲ್ಲಿರುವಾಗ ವಾಹನ ಅಪಘಾತವೊಂದರಲ್ಲಿ ಜುಲೈ 23, 1978 ರಂದು ಮೃತರಾಗಿದ್ದರು. ಪರಿಷ್ಕೃತ ಪಿಂಚಣಿ ಯೋಜನೆಯು ಜಾರಿಗೆ ಬರುವ ಸಾಕಷ್ಟು ಮುಂಚೆಯೇ ಅವರು ತೀರಿಕೊಂಡಿದ್ದರಿಂದ ಅವರಿಗೆ ಪರಿಷ್ಕೃತ ಪಿಂಚಣಿ ಯೋಜನೆಯನ್ನು ನಿರಾಕರಿಸಲಾಗಿತ್ತು ಎಂದು ಹೇಳಿತ್ತು.

ತೀರ್ಪು: ಕೆಪಿಟಿಸಿಎಲ್ ವಾದವನ್ನು ಒಪ್ಪಿದ ವಿಭಾಗೀಯ ಪೀಠವು, "ಮೃತ ನೌಕರನು ಹೊಸ ಪಿಂಚಣಿ ಯೋಜನೆಗೆ ಯಾವುದೇ ವಂತಿಗೆಯನ್ನು ನೀಡಿಲ್ಲ. ಹೀಗಾಗಿ ಅವರ ಪತ್ನಿಯು ಹೊಸ ಪಿಂಚಣಿ ಯೋಜನೆಯಡಿ ಸೌಲಭ್ಯಗಳನ್ನು ಕೇಳುವಂತಿಲ್ಲ. ಇವುಗಳ ವಿಷಯದಲ್ಲಿ ಸಹಾನುಭೂತಿಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವಂತಿಲ್ಲ" ಎಂದು ಹೇಳಿದೆ.

ಇದನ್ನೂ ಓದಿ:ರಾಜ್ಯದಲ್ಲಿನ್ನೂ ಓಮಿಕ್ರಾನ್​​ ತಳಿಗಳು ಪ್ರಾಬಲ್ಯ ಹೊಂದಿವೆ: ಸಚಿವ ಸುಧಾಕರ್​ ಟ್ವೀಟ್‌

ABOUT THE AUTHOR

...view details