ಕರ್ನಾಟಕ

karnataka

ETV Bharat / city

ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಪಟ್ಟಾಭಿಷೇಕಕ್ಕೆ ಕೋರ್ಟ್ ತಡೆಯಾಜ್ಞೆ - ಪುಟ್ಟಸ್ವಾಮಿ ಪಟ್ಟಾಭಿಷೇಕಕ್ಕೆ ಕೋರ್ಟ್ ತಡೆಯಾಜ್ಞೆ

ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಲಿದ್ದ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಪುಟ್ಟಸ್ವಾಮಿ ಪಟ್ಟಾಭಿಷೇಕ
ಪುಟ್ಟಸ್ವಾಮಿ ಪಟ್ಟಾಭಿಷೇಕ

By

Published : May 14, 2022, 7:54 AM IST

ಬೆಂಗಳೂರು: ಇದೇ ಮೇ 15ರಂದು ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಬೇಕಿದ್ದ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಪುಟ್ಟಸ್ವಾಮಿ ಪಟ್ಟಾಭಿಷೇಕ ಪ್ರಶ್ನಿಸಿ ಎನ್. ರಾಜು, ರಂಗಸ್ವಾಮಿ, ಎಂ.ಪಿ ಹೇಮಾವತಿ, ಟಿ.ಎಂ.ಸಿ ಯತೀಶ್ ಕುಮಾರ ಹಾಗೂ ಗೋವಿಂದರಾಜು ಎಂಬುವರು ಸಲ್ಲಿಸಿರುವ ಸಿವಿಲ್ ದಾವೆಯ ತುರ್ತು ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಈ ಆದೇಶ ಮಾಡಿದೆ. ಬಿ.ಜೆ. ಪುಟ್ಟಸ್ವಾಮಿ ಅವರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಸ್ಥಾನ ಅಧಿರೋಹಣ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ಜೂ.13ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಸಿಪಿಸಿ ಕಲಂ 92ರ ಅಡಿಯಲ್ಲಿ ವಾದಿಗಳು ಸಲ್ಲಿಸಿರುವ ಸಿವಿಲ್‌ ದಾವೆಯಲ್ಲಿ, 'ವಿಶ್ವ ಗಾಣಿಗ ಸಮುದಾಯದ ಟ್ರಸ್ಟ್‌ ರಚನೆಯೇ ಕಾನೂನು ಬಾಹಿರವಾಗಿದೆ. ಆದ್ದರಿಂದ ಇದೇ 15ರಂದು ಬಿ.ಜೆ ಪುಟ್ಟಸ್ವಾಮಿ ಅವರು ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮುಂದಿನ ವಿಚಾರಣೆವರೆಗೂ ಟ್ರಸ್ಟ್ ತನ್ನ ಚಟುವಟಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂದು ಮಧ್ಯಂತರ ಆದೇಶ ನೀಡಿದ್ದು, ವಿಚಾರಣೆಯನ್ನು 2022ರ ಜೂನ್‌ 16ಕ್ಕೆ ಮುಂದೂಡಿದೆ.

ಇದೇ ವೇಳೆ ನ್ಯಾಯಾಲಯ ಪ್ರತಿವಾದಿಗಳಾದ ಬಿ.ಜೆ ಪುಟ್ಟಸ್ವಾಮಿ, ಅಖಿಲ ಕರ್ನಾಟಕ ಗಾಣಿಗ ಸಂಘದ ಆಡಳಿತಾಧಿಕಾರಿ ಎಂ.ಪಿ ಮಂಜುನಾಥ್ ಸೇರಿದಂತೆ ವಿಶ್ವ ಗಾಣಿಗ ಸಮುದಾಯದ ಟ್ರಸ್ಟ್‌ನ 10 ಮಂದಿ ಟ್ರಸ್ಟಿಗಳು ಮತ್ತು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆದೇಶದಿಂದಾಗಿ ಬಿ.ಜೆ. ಪುಟ್ಟಸ್ವಾಮಿ ಅವರು ಮೇ 15ರಂದು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

(ಇದನ್ನೂ ಓದಿ: ಸನ್ಯಾಸತ್ವ ಸ್ವೀಕರಿಸಿದ ಮಾಜಿ ಸಚಿವ.. ಬಿ.ಜೆ. ಪುಟ್ಟಸ್ವಾಮಿ ಇನ್ಮುಂದೆ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ)

For All Latest Updates

TAGGED:

ABOUT THE AUTHOR

...view details