ಕರ್ನಾಟಕ

karnataka

ETV Bharat / city

ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ; ಕಾಟಚಾರಕ್ಕಷ್ಟೆ ಕೆಡಿಪಿ ಸಭೆ : ಶಾಸಕ ಸುಬ್ಬಾರೆಡ್ಡಿ ಆರೋಪ - Bagepalli MLA Subbareddy

ಒಂದು ಬೋರ್ವೆಲ್ ಕೊರೆಸಲು ಐವತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾರೆ. ಜಿಲ್ಲಾ ವ್ಯವಸ್ಥಾಪಕರು ಇಪ್ಪತ್ತು ಸಾವಿರ, ಫೀಲ್ಡ್ ಆಫೀಸರ್ 10 ಸಾವಿರ, ಏಜೆಂಟ್ 20 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ ಎಂದು ಶಾಸಕ ಸುಬ್ಬಾರೆಡ್ಡಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಇದರ ಬಗ್ಗೆ ದೃಶ್ಯ ಸಹಿತ ತನ್ನ ಬಳಿ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ..

MLA Subbareddy talked to Press
ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

By

Published : Apr 9, 2022, 4:50 PM IST

ಚಿಕ್ಕಬಳ್ಳಾಪುರ :ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಲಂಚಾವತಾರ ನಡೆಯುತ್ತಿದ್ದರೂ ಸರ್ಕಾರ ಮೌನವಹಿಸಿದೆ. ಜಿಲ್ಲೆಯ ಎಸ್ಸಿ-ಎಸ್ಟಿ ನಿಗಮಗಳಲ್ಲಿ ಲಂಚಬಾಕರ ಹಾವಳಿ ಹೆಚ್ಚಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ಆರೋಪಿಸಿದ್ದಾರೆ.

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿರುವುದು..

ಒಂದು ಬೋರ್ವೆಲ್ ಕೊರೆಸಲು ಐವತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾರೆ. ಜಿಲ್ಲಾ ವ್ಯವಸ್ಥಾಪಕರು ಇಪ್ಪತ್ತು ಸಾವಿರ, ಫೀಲ್ಡ್ ಆಫೀಸರ್ 10 ಸಾವಿರ, ಏಜೆಂಟ್ 20 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ. ಇದರ ಬಗ್ಗೆ ದೃಶ್ಯ ಸಹಿತ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಹೇಳಿದರು.

ಇನ್ನೂ ಬಗರ್‌ಹುಕಂ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ಸಹಿ ಸೃಷ್ಟಿಸಿ 50 ಎಕರೆ ಸಾಗುವಳಿ ಚೀಟಿಗಳನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಇದರ ಬಗ್ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಿಲ್ಲ. ಭ್ರಷ್ಟಚಾರ ಮಾಡಿದ್ರು ಅವರ ಮೇಲೆ‌ ಕ್ರಮಕೈಗೊಳ್ಳಲು 2 ವರ್ಷ ಬೇಕಾ ಎಂದು ಪ್ರಶ್ನಿಸಿದರು.

ಕಾಟಾಚಾರಕ್ಕೆ ಕೆಡಿಪಿ ಸಭೆ ಮಾಡುತ್ತಾರೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮೂರು ತಿಂಗಳಿಗೆ ಒಮ್ಮೆ ಸಭೆ ಮಾಡಬೇಕು. ಸಭೆಗಳನ್ನು ಮಾಡುವ ನಿಯಮ ಪಾಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. 52 ಇಲಾಖೆಗಳಲ್ಲಿ 4 ಇಲಾಖೆಗಳನ್ನು ಮಾತ್ರ ಪರಿಶೀಲನೆ ಮಾಡಿದ್ದಾರೆ. ಉಳಿದ ಇಲಾಖೆಗಳ ಬಗ್ಗೆ ಪರಿಶೀಲನೆ ಮಾಡಿಲ್ಲ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಬೆಂಗಳೂರು : ರಸ್ತೆ ಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಟೆಕ್ಕಿ ಸಮೂಹದಿಂದ ಭಾರೀ ಆಕ್ರೋಶ

ABOUT THE AUTHOR

...view details