ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಕಂಬರಿನಗರ ವಾರ್ಡ್ ಕಾರ್ಪೊರೇಟರ್ ಮಾಲತಿ ಸೋಮಶೇಖರ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದರು.
ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭಹಾರೈಸಿದ ಮಹಿಳಾ ಕಾರ್ಪೊರೇಟರ್ - ಕೊರೊನಾ ಎಫೆಕ್ಟ್
ಶಾಕಂಬರಿನಗರ ವಾರ್ಡ್ ಕಾರ್ಪೊರೇಟರ್ ಮಾಲತಿ ಸೋಮಶೇಖರ್ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದರು.
ಮಾಲತಿ ಸೋಮಶೇಖರ್
ಜಯನಗರದ 8ನೇ ಹಂತದಲ್ಲಿರುವ ಜೆಎಸ್ಎಸ್ ಪ್ರೌಢಶಾಲೆಗೆ ಆಗಮಿಸಿದ ಕಾರ್ಪೊರೇಟರ್ ಪರೀಕ್ಷಾ ಕೇಂದ್ರದ ಸುರಕ್ಷತಾ ಕ್ರಮಗಳ ಬಗ್ಗೆ ಶಾಲೆ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಕಾರ್ಪೊರೇಟರ್ ಮಾಲತಿ ಸೋಮಶೇಖರ್, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿದ್ದ ಪರೀಕ್ಷೆ ಇಂದು ಆರಂಭವಾಗಿದೆ. ಅಲ್ಲದೇ ವಿದ್ಯಾರ್ಥಿಗಳು ಇನ್ನು ಕೂಡ ಗೊಂದಲದಲ್ಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ದಿನಗಳಿಂದ ನಾನೇ ನಿಂತು ಇಡೀ ಶಾಲೆಗೆ ಸ್ಯಾನಿಟೈಸೇಷನ್ ಮಾಡಿಸಿದ್ದೇನೆ ಎಂದರು.