ಕರ್ನಾಟಕ

karnataka

ETV Bharat / city

ಕೊರೋನಾ ಭೀತಿ: ಸೋಂಕು ತಡೆಗಟ್ಟಲು ಆಯುಷ್‌ ಪದ್ಧತಿಯಿಂದ ಮಾರ್ಗಸೂಚಿ.. - how to control Corona virus

ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಆಯುಷ್ ಆಸ್ಪತ್ರೆಗಳಿಗೂ ಸುತ್ತೋಲೆ ರವಾನೆ ಮಾಡಲಾಗಿದೆ‌‌. ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಯುಷ್ ಸೂಚನೆ ನೀಡಿದೆ.

Guidelines from AYUSH
ಸೋಂಕು ತಡೆಗಟ್ಟಲು ಆಯುಷ್‌ ಪದ್ಧತಿಯಿಂದ ಮಾರ್ಗಸೂಚಿ

By

Published : Mar 9, 2020, 10:00 PM IST

ಬೆಂಗಳೂರು: ಕೊರೊನಾ ವೈರಸ್​ನಿಂದಾಗಿ ಜನ ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆ ಕೊರೋನಾ ವೈರಸ್ ಕುರಿತು ಆಯುಷ್ ಮಂತ್ರಾಲಯ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿದೆ‌‌.

ಕೊರೊನಾ ತಡೆಗಟ್ಟುವ ವಿಧಾನದ ಕುರಿತು ಮಾಹಿತಿ..

ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಆಯುಷ್ ಆಸ್ಪತ್ರೆಗಳಿಗೂ ಸುತ್ತೋಲೆ ರವಾನೆ ಮಾಡಲಾಗಿದೆ‌‌. ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಯುಷ್ ಸೂಚನೆ ನೀಡಿದೆ.

ಕೊರೊನಾ ತಡೆಗಟ್ಟುವ ವಿಧಾನ :

1) ತಾಜಾ ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನ ಸೇವಿಸುವುದು.

2) ತುಳಸಿ, ಶುಂಠಿ ಹಾಗೂ ಅರಿಶಿಣಗಳನ್ನು ಬಿಸಿನೀರಿನಲ್ಲಿ ಕುದಿಸಿ ಸ್ವಲ್ಪ ಸ್ವಲ್ಪ ಆಗಾಗ ಕುಡಿಯುವುದು.

3) ಕೆಮ್ಮು ಇದ್ದಾಗ ಜೇನುತುಪ್ಪದೊಂದಿಗೆ 1 ಚಿಟಿಕೆ ಕಾಳು ಮೆಣಸಿನ ಪುಡಿಯೊಂದಿಗೆ ಸೇವಿಸುವುದು.

4) ಶೀತಲೀಕರಿಸಿದ ಪದಾರ್ಥಗಳನ್ನು ಸೇವಿಸಬಾರದು.

5) ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು.

6) ಯೋಗಾಸನ ಮತ್ತು ಪ್ರಾಣಾಯಾಮವನ್ನು ಮಾಡುವುದು.

ಕೊರೊನಾ ವೈರಸ್​ ನಿಯಂತ್ರಕ್ಕೆ ಉಪಯೋಗಿಸಬಹುದಾದ ಔಷಧ ಸಸ್ಯಗಳು :

1. ತುಳಸಿ

2. ಅಮೃತಬಳ್ಳಿ

3. ಅರಶಿಣ

ತಡೆಗಟ್ಟುವ ಸಾಮಾನ್ಯ ವಿಧಾನ:

1) ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

2) ಆಗಾಗ ಸಾಬೂನಿನಿಂದ ಕೈ ತೊಳೆಯುವುದು.

3) ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು.

4) ಕೆಮ್ಮು ಮತ್ತು ಶೀತದ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು ಹಾಗೂ ಸರಿಯಾಗಿ ಬೇಯಿಸದ ಮಾಂಸ ಸೇವಿಸಬಾರದು.

5) ಜೀವಂತ ಪ್ರಾಣಿಗಳ ಸಂಪರ್ಕ ಮಾಡದಿರುವುದು

6) ಕಸಾಯಿಖಾನೆ ಹಾಗೂ ಪ್ರಾಣಿಗಳ ಸ್ಥಳಗಳಿಂದ ದೂರವಿರುವುದು

7) ಕೆಮ್ಮು ಮತ್ತು ಸೀನು ಲಕ್ಷಣಗಳಿದ್ದಲ್ಲಿ ಮಾಸ್ಕ್‌ ಧರಿಸುವುದು.

ABOUT THE AUTHOR

...view details