ಯಲಹಂಕ: ಐಟಿಸಿ ಕಾರ್ಖಾನೆಯ 14 ನೌಕರರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಟಿಸಿ ಕಾರ್ಖಾನೆಯ 14 ನೌಕರರಿಗೆ ತಗುಲಿದ ಕೊರೊನಾ - ಬೆಂಗಳೂರು ಕೊರೊನಾ ಪ್ರಕರಣಗಳು
ಯಲಹಂಕದ ಏರ್‌ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ಇರುವ ಐಟಿಸಿ ಕಾರ್ಖಾನೆಗೆ ಕೊರೊನಾ ಲಗ್ಗೆ ಇಟ್ಟಿದೆ. ಬೆಂಗಳೂರಿನ ಬನಶಂಕರಿ ಮೂಲದ 12, ಮಾರನಹಳ್ಳಿ ಗ್ರಾಮದ 1, ಉತ್ತನಹಳ್ಳಿ ಗ್ರಾಮದ ಒಬ್ಬ ನೌಕರನಿಗೆ ಸೋಂಕು ತಗುಲಿದೆ.
Itc
ಯಲಹಂಕದ ಏರ್‌ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ಇರುವ ಐಟಿಸಿ ಕಾರ್ಖಾನೆಗೆ ಕೊರೊನಾ ಲಗ್ಗೆ ಇಟ್ಟಿದೆ. ಬೆಂಗಳೂರಿನ ಬನಶಂಕರಿ ಮೂಲದ 12, ಮಾರನಹಳ್ಳಿ ಗ್ರಾಮದ 1, ಉತ್ತನಹಳ್ಳಿ ಗ್ರಾಮದ ಒಬ್ಬ ನೌಕರನಿಗೆ ಸೋಂಕು ತಗುಲಿದೆ.
ಕಾರ್ಖಾನೆಯಲ್ಲಿ 800ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಹಲವು ದಿನಗಳ ಹಿಂದೆಯೇ ಕಾರ್ಖಾನೆಯನ್ನು ಸ್ಯಾನಿಟೈಸ್ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಸಂಸ್ಥೆ ಸ್ಯಾನಿಟೈಸ್ ಮಾಡಿಸದೆ ಕೆಲಸ ಮಾಡಿಸುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದೆ.