ಬೆಂಗಳೂರು:ಕೊರೊನಾ ವೈರಸ್ ಸಾಕಷ್ಟು ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ. ಓರ್ವನಿಗೆ ಕೊರೊನಾ ಸೋಂಕು ಬಂದರೆ ಆ ವ್ಯಕ್ತಿಯಿಂದ ಎಲ್ಲರೂ ದೂರವಾಗಿ ಬಿಡುತ್ತಾರೆ. ಒಂದು ವೇಳೆ, ಸೋಂಕಿತ ಸಾವನ್ನಪ್ಪಿದರೆ ಮೃತದೇಹವನ್ನು ಯಾರೂ ಮುಟ್ಟುವಂತಿಲ್ಲ, ನೋಡುವಂತಿಲ್ಲ. ಇಂಥಾ ವೇಳೆ ಮೃತದೇಹಕ್ಕೆ ಮುಕ್ತಿ ಕಾಣಿಸೋರೇ ಈ ಕೊರೊನಾ ವಾರಿಯರ್ಸ್.
ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು: ಜಾತಿ, ಧರ್ಮ ಮೀರಿದ ಕರುಣಾಮಯಿಗಳು! - ಬೆಂಗಳೂರಿನಲ್ಲಿ ಕೊರೊನಾ
ಶಾಸಕ ಜಮೀರ್ ಅಹಮದ್ ತಂಡವೊಂದನ್ನು ನಿಯೋಜಿಸಿದ್ದು, ಈ ತಂಡ ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೇ ಕೊರೊನಾ ಸೋಂಕಿನಿಂದ ಮೃತಪಟ್ಟ ಸುಮಾರು ನೂರಕ್ಕೂ ಹೆಚ್ಚು ಶವಗಳಿಗೆ 'ಮುಕ್ತಿ' ಕಾಣಿಸಿದ್ದಾರೆ.
ಬೆಂಗಳೂರಿನ ಪಾಲಿಗೆ ಇವರೇ ಕರುಣಾಮಯಿಗಳು. ಕೋವಿಡ್ನಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು. ಇದಕ್ಕಾಗಿ ಶಾಸಕ ಜಮೀರ್ ಅಹಮದ್ ಒಂದು ತಂಡವನ್ನು ನಿಯೋಜಿಸಿದ್ದು, ಈ ತಂಡದಲ್ಲಿನ 20ಕ್ಕೂ ಹೆಚ್ಚು ಮಂದಿಯಿದ್ದಾರೆ. ಕೊರೊನಾದಿಂದ ಮೃತಪಟ್ಟ ಎಷ್ಟೋ ಅನಾಥ ಶವಗಳಿಗೆ ಮುಕ್ತಿ ಕೊಡುವ ಕೆಲಸ ಮಾಡುತ್ತಿರುವ ಇವರು ಸಾವನ್ನಪ್ಪಿದವರ ಧರ್ಮದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಾರೆ.
ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಹಿಂದೆ ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದವರಿಗೂ ಕೂಡಾ ಇವರು ಮಾದರಿಯಾಗಿದ್ದಾರೆ. ಎಷ್ಟೋ ಬಾರಿ ಇವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಆದರೂ ಇವರ ಕರ್ತವ್ಯನಿಷ್ಠೆಗೆ ಸ್ವಲ್ಪವೂ ಮುಕ್ಕಾಗಿಲ್ಲ.